Vermicomposting Techniques (ಎರೆಹುಳು ಗೊಬ್ಬರ)
ರೈತನ ಮಿತ್ರ ಎರೆಹುಳು ಎನ್ನುವುದು ನಮಗೆಲ್ಲಾ ಗೊತ್ತು. ಪ್ರಸ್ತುತ ದಿನಗಳಲ್ಲಿ ಸಾವಯವ ಕೃಷಿಯತ್ತ ಜನರ ಮನಸ್ಸು ಹೋಗುತ್ತಿದೆ. ಸಾವಯವ ಕೃಷಿಯಲ್ಲಿ ಎರೆಹುಳು ಗೊಬ್ಬರ ಒಂದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಎರೆಹುಳು ಗೊಬ್ಬರ ಒಂದು ಉಪಕಸುಬು ಆಗಿದೆ. ಆದ್ದರಿಂದ ಪ್ರತಿಯೊಬ್ಬ ರೈತನು ಕೂಡ ಎರೆಹುಳು ಗೊಬ್ಬರವನ್ನು ತನ್ನ ಮನೆಯಲ್ಲೇ ತಯಾರಿಸಿಕೊಂಡು ಜಮೀನಲ್ಲಿ ಬಳಸಿಕೊಳ್ಳಬಹುದು, ತನ್ನ ಕೃಷಿಗೆ ಬಳಸಿಕೊಳ್ಳಬಹುದು.
ಭೂಮಿಯ ಫಲವತ್ತತೆಗೆ ಸಾವಯವ ಅಂಶವನ್ನು ಸೇರಿಸುವುದು ತುಂಬಾ ಮುಖ್ಯ. ಸಾವಯವ ಗೊಬ್ಬರ ಗಳಲ್ಲಿ ಎರೆಹುಳು ಗೊಬ್ಬರ ಕೂಡ ಒಂದು. ಎರೆಹುಳು ಗೊಬ್ಬರವನ್ನು ಬಳಸಿಕೊಂಡು ರೈತರು ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಹಾಗೆಯೇ ಇದನ್ನು ಕಸುಬಾಗಿ ತೆಗೆದುಕೊಂಡು ವ್ಯಾಪಾರವನ್ನು ಸಹ ಪ್ರಾರಂಭಿಸಬಹುದು. ಇದರಿಂದ ಸಂಪಾದನೆ ಮಾಡಬಹುದು. ಉತ್ತಮ ಇಳುವರಿಗೆ ರೈತರು ಉತ್ತಮ ಗುಣಮಟ್ಟದ ಎರೆಹುಳು ಗೊಬ್ಬರವನ್ನು ತಯಾರಿಸುವುದು ಅತ್ಯವಶ್ಯಕವಾಗಿದೆ.
ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಬಳಸಿ ಸಾವಯವಗೊಬ್ಬರವನ್ನು ಹೆಚೆಚ್ಚು ಬಳಸಬೇಕು. ಇದಕ್ಕೆ ಪರ್ಯಾಯವಾಗಿ ಕೃಷಿಯಲ್ಲಿ ಎರೆಹುಳು ಗೊಬ್ಬರವನ್ನು ಬಳಸಿದಲ್ಲಿ ಉತ್ಕೃಷ್ಟ ಇಳುವರಿಯನ್ನು ಪಡೆದು ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.
ಇದನ್ನೂ ಓದಿ: ನೀವು 15 ದಿನಗಳಲ್ಲಿ 5 ಕೆಜಿ ತೂಕವನ್ನು ಕಳೆದುಕೊಳ್ಳಲು ಹೀಗೆ ಮಾಡಿ
ಎರೆಹುಳು ಗೊಬ್ಬರ ಎಂದರೇನು?
ಭೂಮಿಗೆ ಸೇರಿದ ಕೃಷಿ ತ್ಯಾಜ್ಯವನ್ನು ಎರೆಹುಳುಗಳು ತಿಂದು ಹಿಕ್ಕೆ ಹಾಕಿ ಗೊಬ್ಬರವನ್ನು ಕೊಡುತ್ತವೆ. ಇದನ್ನು ಎರೆಹುಳು ಗೊಬ್ಬರ ಎನ್ನುತ್ತಾರೆ.
ಇದನ್ನೂ ಓದಿ : ಚಳಿಗಾಲದಲ್ಲಿ ಈ ಮನೆಮದ್ದುಗಳನ್ನು ಬಳಸಿ ಶೀತದಿಂದ ದೂರವಿರಿ
ಎರೆಹುಳು ಗೊಬ್ಬರದ ಪ್ರಾಮುಖ್ಯತೆ ಏನು?
ನಾವು ತಿಪ್ಪೆ ಗೊಬ್ಬರ ಮತ್ತು ಎರೆಹುಳು ಗೊಬ್ಬರವನ್ನು ಹೋಲಿಕೆ ಮಾಡಿದರೆ ತಿಪ್ಪೆ ಗೊಬ್ಬರಕ್ಕೆ 8-10 ತಿಂಗಳು ತಾಗಬಹುದು. ಅದೇ ಎರೆಹುಳು ಗೊಬ್ಬರ ತಯಾರಿಸಲು 3 ತಿಂಗಳು ಸಾಕು. ಹಾಗಾಗಿ ನಾವು ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತೇವೆ.
ಎರೆಹುಳು ಗೊಬ್ಬರವನ್ನು ಮನೆಯಲ್ಲಿ ಹೇಗೆ ತಯಾರಿಸುವುದು?
ಮೊದಲಿಗೆ ಎರೆಹುಳು ಘಟಕವನ್ನು ನಿರ್ಮಿಸಿಕೊಳ್ಳಬೇಕು. (10 ಮೀಟರ್ ಉದ್ದ, 1 ಮೀಟರ್ ಅಗಲ, 0.3 ಮೀಟರ್ ಆಳ ಈ ಸಾಂದ್ರತೆಯಲ್ಲಿ ಘಟಕವನ್ನು ತಯಾರಿಸ ಬಹುದು. ) ಎರೆಹುಳು ಗೊಬ್ಬರ ತಯಾರಿಕೆಗೆ ಬೇಕಾಗುವ ಕಚ್ಚಾಸಾಮಗ್ರಿಗಳನ್ನು ಇದರ ಘಟಕದಲ್ಲಿ ಪದರ ರೂಪದಲ್ಲಿ ತುಂಬಿ ಕಳೆಯಲು ಬಿಡಬೇಕು. ತೇವಾಂಶ ಕಾಪಾಡಿಕೊಳ್ಳಲು ಹೊದಿಕೆ ಹಾಕಬೇಕು. ನಂತರ ಪ್ರಾರಂಭದ ೧೫ ದಿನಗಳು ಅಗತ್ಯಕ್ಕೆ ಅನುಸಾರವಾಗಿ ನೀರು ಸಿಂಪಡಣೆ ಮಾಡಬೇಕು.
ಇದನ್ನೂ ಓದಿ : ಈ ಸ್ವಂತ ಉದ್ಯೋಗದಿಂದ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸಿ
ಮೊದಲನೇ ಪದರದಲ್ಲಿ ಹೆಚ್ಚು ನಾರಿನಂಶವಿರುವ ಕಚ್ಚಾ ಸಾಮಗ್ರಿಯನ್ನು ತುಂಬಬೇಕು. ಏಕೆಂದರೆ ಅದರಲ್ಲಿ ತೇವಾಂಶ ಉಳಿಯುವ ಸಲುವಾಗಿ. ಎರಡನೇ ಪದರದಲ್ಲಿ ಕಳೆತಿರುವಂತಹ ತಿಪ್ಪೆ ಗೊಬ್ಬರದ ಜೊತೆಗೆ ಹಸಿರೆಲೆ ಗೊಬ್ಬರವನ್ನು ಹಾಕಬೇಕು. ಮೂರನೇ ಪದರದಲ್ಲಿ ಕಸ ಕಡ್ಡಿ, ಕೃಷಿತ್ಯಾಜದ ಒಣ ಹುಲ್ಲು, ಇವುಗಳನ್ನು ಹಾಕಿ. ನಾಲ್ಕನೇ ಪದರದಲ್ಲಿ ಸೆಗಣಿಯನ್ನು ನೀರಲ್ಲಿ ಕಲಸಿ ಹಾಕಬೇಕು. ಐದನೇ ಪದರ ಮತ್ತೆ ಒಣ ಹುಲ್ಲು, ಹಸಿರೆಲೆ ಗೊಬ್ಬರವನ್ನು ಹಾಕಿ. ಕೊನೆಯ ಆರನೇ ಪದರದಲ್ಲಿ ತೇವಾಂಶ ಉಳಿಯಲು ಹೊದಿಕೆ ಹಾಕಬೇಕು ಅಂದರೆ ಹತ್ತಿ ಕಟ್ಟಿಗೆ, ತೊಗರಿ ಕಟ್ಟಿಗೆ ಅಥವಾ ತೆಂಗಿನ ಗರಿ ಇವೆಲ್ಲವನ್ನು ಹಾಕಿ ಹೊದಿಕೆ ಹಾಕಬೇಕು.
ನಂತರ 15 ದಿನಗಳವರೆಗೆ ದಿನಕ್ಕೆ ಎರಡು ಬಾರಿಯಂತೆ ನೀರನ್ನು ಸಿಂಪಡಿಸಬೇಕು. 15 ದಿನಗಳ ನಂತರ 1 ಮೀಟರ್ಗೆ 3000 ಹುಳುಗಳಂತೆ ತೊಟ್ಟಿಗೆ ಬಿಡಬೇಕು (10 ಸೆಂಟಿಮೀಟರ್ ಆಳದಲ್ಲಿ). ಇದಾದ ನಂತರ ೩ ತಿಂಗಳಲ್ಲಿ ಎರೆಹುಳು ಗೊಬ್ಬರ ನಮಗೆ ಸಿಗುತ್ತದೆ.
ಎರೆಹುಳು ಗೊಬ್ಬರವನ್ನು ಬಳಸಿ ನಿಮ್ಮ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಹೆಚ್ಚಿನ ಇಳುವರಿಯನ್ನು ಪಡೆಯಿರಿ. ನಿಮ್ಮ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ whatsapp group ಗೆ join ಆಗಿ.