ನಿಮ್ಮ ಆಧಾರ್ ದಾಖಲೆ ಅಪ್ಡೇಟ್ ಮಾಡುವುದಿದ್ದರೆ ಆನ್ಲೈನ್ನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಮಾಡಬಹುದು. 3 ತಿಂಗಳ ಕಾಲ ಅಂದರೆ ಬರುವ ಜೂನ್ 14ರವರೆಗೆ ಯಾವುದೇ ಶುಲ್ಕವಿಲ್ಲದೇ ಪೋರ್ಟಲ್ನಲ್ಲಿ ಆಧಾರ್ ಅಪ್ಡೇಟ್ ಮಾಡಲು ಅವಕಾಶ ಕೊಡಲಾಗಿದೆ.
ಆಧಾರ್ ಕಾರ್ಡ್ನಲ್ಲಿರುವ ಮಾಹಿತಿಯನ್ನು ಅಪ್ಡೇಟ್ ಮಾಡಲು ಸರಕಾರವು ಒಂದು ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದೆ. ಹೌದು ಸ್ನೇಹಿತರೆ ನಮ್ಮ ಆಧಾರ್ ಕಾರ್ಡ್ನಲ್ಲಿ ಏನಾದರು ತಿದ್ದುಪಡಿ ಮಾಡಬೇಕೆಂದರೆ ನಾವು ಅಧಾರ್ ಕೇಂದ್ರಕ್ಕೆ ಹೋಗಿ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತಿತ್ತು. ಆದರೆ ಇದೀಗ ಅನ್ಲೈನ್ನಲ್ಲೇ ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಮಾಡುವ ಅವಕಾಶವನ್ನು ಸರ್ಕಾರ ಭಾರತ ಜನತೆಗೆ ಕಲ್ಪಿಸಿದೆ.
ಆದರೆ, ಈ ಸೇವೆ ೩ ತಿಂಗಳವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಂದರೆ ೩ ತಿಂಗಳವರೆಗೆ ಇದಕ್ಕೆ ನೀವು ಯಾವುದೇ ಶುಲ್ಕವನ್ನು ಪಾವತಿಸಲು ಇರುವುದಿಲ್ಲ. ಮಾಹಿತಿಯ ಪ್ರಕಾರ 2023 ಮಾರ್ಚ್ 15ರಿಂದ 2023 ಜೂನ್ 14ರವರೆಗೆ ಮೈ ಆಧಾರ್ ಪೋರ್ಟಲ್ನಲ್ಲಿ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು.
ರೈತರಿಗೊಂದು ಸಿಹಿ ಸುದ್ದಿಇನ್ನು ನಿಮಗೆ ಸಾಲಕ್ಕೆ ಅಲ್ಲಿ ಇಲ್ಲಿ ಓಡಾಡಬೇಕಿಲ್ಲ ಅಂಚೆಕಚೇರಿಯಲ್ಲೇ ಸಾಲ, ಅಲ್ಲೇ ಮರುಪಾವತಿ
ಇದನ್ನು ನೀವು ಆಧಾರ್ ಕೇಂದ್ರಗಳಿಗೆ ಹೋಗಿಯೂ ಅಪ್ಡೇಟ್ ಮಾಡಬಹುದು. ಆದರೆ ಅಲ್ಲಿ ನೀವು ಹಿಂದಿನಂತೆ 50 ರುಪಾಯಿ ಶುಲ್ಕ ಕೊಡಬೇಕಾಗುತ್ತದೆ. ಈ ಅಪ್ಡೇಟ್ಸ್ ಗಳು ಆಧಾರ್ನಲ್ಲಿ ವಂಚನೆ ಸಾಧ್ಯತೆಯನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
Karnataka Ganga Kalyana Scheme 2023 | ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023
ಆನ್ಲೈನ್ನಲ್ಲಿ ಆಧಾರ್ ದಾಖಲೆ ಅಪ್ಡೇಟ್ ಹೀಗೆ ಮಾಡಿ
ನೀವು ಆಧಾರ್ ಕೇಂದ್ರಕ್ಕೆ ಹೋಗದೇ ಆನ್ಲೈನ್ನಲ್ಲೇ ಆಧಾರ್ ದಾಖಲೆಗಳನ್ನು ಅಪ್ಡೇಟ್ ಮಾಡಬೇಕೆಂದರೆ ಮೊದಲಿಗೆ ಮೈ ಆಧಾರ್ ಪೋರ್ಟಲ್ಗೆ ಭೇಟಿನೀಡಿ. ಅಲ್ಲಿ ನಿಮ್ಮ ಆಧಾರ್ ನಂಬರ್ ಏನಿದೆ ಅದೇ ಯೂಸರ್ ನೇಮ್ ಆಗಿರುತ್ತದೆ. ನಂತರ ನಿಮ್ಮ ಆಧಾರ್ ಜೊತೆಗೆ ನೊಂದಾಯಿತವಾದ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿ ಅಂಕೆಯನ್ನು ನಮೂದಿಸಿ ಮೈ ಆಧಾರ್ ಪೋರ್ಟಲ್ಗೆ ಲಾಗಿನ್ ಆಗಬಹುದು.
ಆನ್ಲೈನ್ನಲ್ಲಿ ಶುಲ್ಕವಿಲ್ಲದೇ ಆಧಾರ್ ಮಾಹಿತಿ ಅಪ್ಡೇಟ್ ಮಾಡಲು ಅವಕಾಶ ಇರುವುದು ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ ಬೇರೆಲ್ಲೂ ಸಾಧ್ಯವಿಲ್ಲ.