Aase Kannada Serial: ಆಸೆ ಧಾರಾವಾಹಿಯ ನಾಳಿನ ಸಂಚಿಕೆಯಲ್ಲಿ ಏನಾಗ್ತಿದೆ ಅಂತ ನೋಡೋಣ ಬನ್ನಿ ಮೊದಲಿಗೆ ಕರಿಮಣಿ ಶಾಸ್ತ್ರಕ್ಕೆ ಅಂತ ದುಡ್ಡು ಖರ್ಚಾಗುತ್ತೆ ಏನ್ ಮಾಡೋದು ಅಂತ ರೋಹಿಣಿ ತಾಯಿಗೆ ಫೋನ್ ಮಾಡಿ ಕೇಳಿರ್ತಾಳೆ ಆಗ ಅವರು ನನ್ನ ಹತ್ರ ಸ್ವಲ್ಪ ಒಡವೆ ಇದೆ ಅದನ್ನ ಮಾರ್ ಕೊಡ್ತೀನಿ ಅಂತ ಹೇಳಿರ್ತಾರೆ. ಹಾಗಾಗಿ ಚಿನ್ನಮ್ಮ ಮರಿ ದುಡ್ಡು ತಗೊಂಡು ನೇರವಾಗಿ ರೋಹಿಣಿ ಪಾರ್ಲರ್ ಗೆ ಬರ್ತಾರೆ. ಅಲ್ಲಿ ಸ್ಟಾಫ್ ಹತ್ರ ರೋಹಿಣಿ ನೋಡಬೇಕು ಅಂತ ಕೇಳಿದಾಗ, ಸ್ಟಾಫ್ ಒಳಗಡೆ ಹೋಗಿ ರೋಹಿಣಿ ಹತ್ರ ಯಾರೋ ಪ್ರಮಿಳ ಅನ್ನೋವರು ನಿಮ್ಮನ್ನ ನೋಡೋದಕ್ಕೆ ಅಂತ ಬಂದಿದ್ದಾರೆ ಹೊರಗಡೆ ವೇಟ್ ಮಾಡ್ತಿದ್ದಾರೆ ಅಂತ ಹೇಳ್ತಾರೆ.
ಆಗ ರೋಹಿಣಿ ಶಾಕ್ ಆಗಿ ಬಂದು ರೋಹಿಣಿ ತಾಯಿನ ಒಳಗಡೆ ಕರ್ಕೊಂಡು ಹೋಗುವಾಗ ನಾನು ಒಳಗಡೆ ತುಂಬಾ ಬ್ಯುಸಿ ಆಗಿರ್ತೀನಿ, ಯಾರು ಬಂದ್ರು ಕೂಡ ಮೊದಲು ನನಗೆ ಹೇಳಿ ಆಮೇಲೆ ಒಳಗಡೆ ಬಿಡಿ ಅಂತ ಹೇಳಿ ಒಳಗಡೆ ಹೋಗ್ತಾಳೆ. ನಂತರ ರೋಹಿಣಿ ಬಂದು ಅಮ್ಮ ಯಾಕಮ್ಮ ಇಲ್ಲಿಗೆ ಬರೋದಕ್ಕೆ ಹೋದೆ. ನಾನು ಹೇಳಿದ್ರೆ ಬರ್ತಿರಲಿಲ್ವಾ? ಅಂದಾಗ ದುಡ್ಡು ಬೇಕು ಅಂತ ಕೇಳಿದಿದ್ಯಲ್ಲ ಕಲ್ಯಾಣಿ, ಅದಕ್ಕೆ ದುಡ್ಡು ಕೊಟ್ಟು ಹಾಗೆ ನಿನ್ನ ನೋಡ್ಕೊಂಡು ಹೋಗೋಣ ಅಂತ ಬಂದೆ ಅಂತ ಪ್ರಮಿಳ ಹೇಳ್ತಾರೆ.
ಆಗ ರೋಹಿಣಿ ಸರಿ ರಿಷಿ ಎಲ್ಲಿ ಅಂತ ಕೇಳಿದಾಗ ಅವ್ನ ಪಕ್ಕದ ಮನೆಯಲ್ಲಿ ಬಿಟ್ಟು ಬಂದಿದ್ದೀನಿ ಕಣೆ, ನಾಳೆ ಅವನಿಗೆ ಪರೀಕ್ಷೆ ಇದೆ ನಾನು ಬೇಗ ವಾಪಸ್ ಹೋಗ್ಬೇಕು. ಅದಕ್ಕೆ ನಿನ್ನ ಪೂಜಾ ಮನೆಯಲ್ಲಿ ಇರು ಅಂತ ಹೇಳಿದ್ರು ಕೂಡ ಕೇಳ್ದೆ ಇಲ್ಲಿಗೆ ಬಂದ್ಬಿಟ್ಟೆ. ಅದೆಲ್ಲ ಸರಿ ನಿನಗೆ ನಾಳೆ ತಾನೇ ಕರಿಮಣಿ ಶಾಸ್ತ್ರ ಮಾಡ್ತಿರೋದು ಮನೇಲೆ ಮಾಡ್ತಿದ್ದಾರೆ ಅಲ್ವಾ ಅಂತ ಕೇಳ್ತಾರೆ. ಇಲ್ಲಮ್ಮ ಶ್ರುತಿಗೂ ನಾಳೆನೇ ಆ ಕರಿಮಣಿ ಶಾಸ್ತ್ರ ಮಾಡ್ತಿದ್ದಾರೆ ಅದಕ್ಕೆ ಅಂತ ಹಾಲ್ ಬುಕ್ ಮಾಡಿದ್ದಾರೆ ಅವರ ಅಪ್ಪ ಅಮ್ಮ.
ಹಾಗಾಗಿ ಅತ್ತೆ ನನಗೂ ಅಲ್ಲೇ ಮಾಡೋಣ ಅಂತ ಹೇಳಿದ್ರು ಅಂತಾಳೆ. ಆಗ ಪ್ರಮೀಳ ಹೌದಾ ಒಳ್ಳೆದಾಗಲಿ ಕಣೆ, ಆ ಹುಡುಗಿನ ನಾನು ಇನ್ನು ನೋಡೇ ಇಲ್ಲ, ಮನೆಗೂ ಗೊತ್ತಿಲ್ದೆ ಹಾಗೆ ಮದುವೆ ಮಾಡ್ಕೊಂಡ್ರಲ್ಲ ಅವರು ಅಂದಾಗ, ಹೌದಮ್ಮ ಮನೇಲಿ ಪ್ರಾಬ್ಲಮ್ ಇಲ್ಲದೆ ನನಗೆ ಮಾತ್ರನೇ ಸರಿಯಾಗಿ ಮದುವೆ ಆಗಿರೋದು ಅಂತ ರೋಹಿಣಿ ಹೇಳಿದಾಗ, ಪ್ರಮೀಳ ರೋಹಿಣಿನ ನೋಡ್ತಿರ್ತಾರೆ, ಅದಕ್ಕೆ ರೋಹಿಣಿ ಯಾಕಮ್ಮ ಹೀಗೆ ನೋಡ್ತಿದ್ದೀಯಾ? ನೀನು ಸುಳ್ಳು ಹೇಳೆ ಮದುವೆ ಆಗಿರೋದು ಅಂತ ಅನ್ಕೋತಿದ್ದೀಯಾ ಅಲ್ವಾ? ಅಂತ ಕೇಳಿದಾಗ,ಇಲ್ಲ ಕಲ್ಯಾಣಿ ನಿನ್ನ ಜೀವನದಲ್ಲಿ ಒಂದು ಒಳ್ಳೆ ಕಾರ್ಯ ನಡೀತಿದೆ ನನಗೆ ನಿನ್ನ ಜೊತೆ ಇರಕ್ಕೆ ಆಗ್ತಿಲ್ವಲ್ಲ ಅಂತ ಅಷ್ಟೇ ಅಂತಾರೆ ಪ್ರಮಿಳ.
Aase Kannada Serial
ಆಗ ರೋಹಿಣಿ ಬೇಜಾರ್ ಮಾಡ್ಕೋಬೇಡಮ್ಮ ಫೋಟೋ ಕಳಿಸ್ತೀನಿ ನೋಡ್ಕೋ ಅಂದಾಗ ಸರಿ ಅಂತ ಹೇಳಿ ತಂದಿದ್ದು ದುಡ್ಡನ್ನ ರೋಹಿಣಿ ಕೈಗೆ ಕೊಟ್ಟು ಇದರಲ್ಲಿ ನೀನು ಕೇಳಿದಷ್ಟು ದುಡ್ಡಿದೆ ಕಣೆ, ಇದರಲ್ಲಿ ನೀನು ತಾಳಿಸಾರ ಮಾಡಿಸ್ಕೊ ತಗೋ ಅಂತ ಹೇಳಿ ಕೊಡ್ತಾರೆ ಪ್ರಮೀಳ. ಆಗ ರೋಹಿಣಿ ಅಮ್ಮ ಇಷ್ಟೊಂದು ದುಡ್ಡು ನಿನ್ನ ಹತ್ರ ಹೇಗೆ ಬಂತು ಅಂತ ಕೇಳಿದಾಗ, ಒಡವೆ ಇದೆ ಅಂತ ಹೇಳಿದ್ನಲ್ಲಮ್ಮ ಅಂತ ಹೇಳ್ತಾರೆ. ನಿನ್ನ ಹತ್ರ ಒಡವೆ ಇದ್ದಿದ್ದು ನಾನು ಯಾವತ್ತೂ ನೋಡೇ ಇಲ್ವಲ್ಲ ಅಂತ ರೋಹಿಣಿ ಕೇಳಿದಾಗ, ಅದು ನನ್ನ ಒಡವೆ ಅಲ್ಲ ಕಣೆ ಕಲ್ಯಾಣಿ ನಿಂದೆ, ನಿನ್ನ ಮೊದಲನೇ ಮದುವೆ ತಾಳಿ ನನ್ನ ಹತ್ರ ಇತ್ತು ಆ ಜೀವನ ಅಂತೂ ನಿನಗೆ ಸರಿ ಹೊಂದಿಲ್ಲ ಆದ್ರೆ ಆದರೆ ಆ ತಾಳಿನ ನಾನು ಭದ್ರವಾಗಿ ಎತ್ತಿಟ್ಟಿದ್ದೆ ಅದನ್ನ ಮಾರಿ ಈ ದುಡ್ಡನ್ನ ತಂದಿದ್ದೀನಿ ಅಂತಾರೆ ಪ್ರಮಿಳ.
ಆಗ ರೋಹಿಣಿ ನಾನು ಯಾವುದನ್ನ ಮರಿಬೇಕು ಅಂತ ಅನ್ಕೋತೀನೋ ಆ ನೆನಪು ನನ್ನ ಹಿಂದೇನೆ ಬರ್ತಿದೆ ಅಮ್ಮ ಅಂತಾಳೆ. ಆಗ ರೋಹಿಣಿ ತಾಯಿ ನೀನು ಯಾವುದರ ಬಗ್ಗೆನು ಚಿಂತೆ ಮಾಡಬೇಡ ಆರಾಮವಾಗಿರು ಅಂತ ಹೇಳ್ತಿರ್ತಾರೆ. ಅಷ್ಟೊತ್ತಿಗೆ ಪಾರ್ಲರ್ ಗೆ ಶಾಂತಿ ಬಂದು ಸ್ಟಾಫ್ ಹತ್ರ ರೋಹಿಣಿ ಇದ್ದಾಳೆನಮ್ಮ ನಾನು ಅವರ ಅತ್ತೆ ಅಂತ ಕೇಳ್ತಾರೆ. ಹೌದು ಒಳಗಡೆ ಇದ್ದಾರೆ ಅಂತ ಹೇಳಿದಾಗ, ಹಾಗಾದ್ರೆ ನಾನೇ ಹೋಗಿ ನೋಡ್ತೀನಿ ಅಂತ ಒಳಗೆ ಹೋಗುವಾಗ ಸ್ಟಾಫ್ ಶಾಂತಿನ ತಡೆದು ಅವರು ಬಿಜಿ ಆಗಿದ್ದಾರೆ.
ಅವರನ್ನ ಕೇಳ್ದೆ ಯಾರನ್ನು ಒಳಗಡೆ ಬಿಡಬಾರದು ಅಂತ ಹೇಳಿದ್ದಾರೆ. ನೀವು ಹೋದ್ರೆ ಆಮೇಲೆ ನನಗೆ ಬೈತಾರೆ ಮೇಡಂ. ಇರಿ ನಾನು ಹೋಗಿ ಕೇಳಿ ಬರ್ತೀನಿ ಮೊದಲು ಅಂತ ಒಳಗಡೆ ಹೋಗ್ತಾಳೆ. ಆಗ ಶಾಂತಿ ಪಾರ್ಲರ್ ಬೋರ್ಡ್ ನೋಡಿ ಓ ನನ್ನ ಹೆಸರಿದ್ದ ಜಾಗ ಈಗ ಏನೇನೋ ಹಾಕಳೆ ಇಲ್ಲಿ ನನ್ನ ಹೆಸರು ಹೋಯ್ತು ಅದರ ಜೊತೆ ನನಗೆ ಮರ್ಯಾದೆನು ಹೋಯ್ತು ಅಂತತಿರ್ತಾರೆ.
ಈ ಕಡೆ ಸ್ಟಾಫ್ ರೋಹಿಣಿ ಹತ್ರ ಬಂದು ಮೇಡಂ ನಿಮ್ಮ ಅತ್ತೆ ಬಂದಿದ್ದಾರೆ ಅಂತ ಹೇಳ್ತಾರೆ. ಆಗ ರೋಹಿಣಿಗೆ ಶಾಕ್ ಆಗಿ ಅವರನ್ನ ಎರಡು ನಿಮಿಷ ಒಳಗಡೆ ಬಿಡಬೇಡ. ಹೊರಗಡೆನೇ ವೇಟ್ ಮಾಡೋದಕ್ಕೆ ಹೇಳು ಅಂತ ಹೇಳಿ ಕಳಿಸ್ತಾಳೆ. ನಂತರ ಎಲ್ಲಾ ಹೋಯ್ತು ನಾನು ಸರಿಯಾಗಿ ಸಿಗಾಕೊಂಡೆ ಅಂತ ಇರ್ತಾಳೆ ರೋಹಿಣಿ. ಆಗ ಪ್ರಮಿಳ ಅವರು ಯಾಕೆ ಇಲ್ಲಿಗೆ ಬಂದ್ರು ಅಂತ ಕೇಳಿದಾಗ, ನನಗೇನಮ್ಮ ಗೊತ್ತು ಅದಕ್ಕೆ ಹೇಳಿದ್ದು ನಿನ್ನ ಇಲ್ಲಿಗೆ ಬರಬೇಡ ಅಂತ ರೋಹಿಣಿ ಹೇಳ್ತಾಳೆ. ಆಗ ಪ್ರಮಿಳ ಸರಿ ಕಣೆ ಅದೆಲ್ಲ ಬಿಡು ಹಿಂದೆ ಬಾಗಿಲು ಯಾವುದಾದರೂ ಇದ್ರೆ ಹೇಳು ನಾನು ಆಕಡೆ ಆ ಕಡೆಯಿಂದ ನಾನು ಹೊರಗಡೆ ಹೋಗ್ಬಿಡ್ತೀನಿ ಅಂದಾಗ, ಹೂ ಇದೆ ಹಾಗೆ ಆ ಗೋಡೆ ಹೊಡ್ಕೊಂಡು ಹೋಗ್ಬಿಡು, ಅಯ್ಯೋ ನೀನು ಬೇರೆ ಟೆನ್ಶನ್ ಮಾಡ್ತಿದ್ದೀಯಾ ಸುಮ್ನಿರಮ್ಮ ಹಾಗೆಲ್ಲ ಹಿಂದೆ ಬಾಗಿಲೆಲ್ಲ ಇಲ್ಲ. ಇಲ್ಲಿ ಈಗ ಹೇಗೆ ಅವರನ್ನ ಸಂಭಾಳಿಸೋದು ಅಂತ ಒದ್ದಾಡುತ್ತಿರ್ತಾಳೆ.ಆಗ ಪ್ರಮೀಳ ಹಾಗಾದ್ರೆ ಒಂದು ಕೆಲಸ ಮಾಡು ಆಚೆ ಹೋಗಿ ಮಾತಾಡಿಸಿ ಹಾಗೆ ಅವರನ್ನ ಕಳಿಸಿಬಿಡು ಹೋಗು ಅಂದಾಗ ಯಾರು ಅವರ ಅತ್ತೆ ಹಾಗೆಲ್ಲ ಹೋಗೋರಲ್ಲ.
Aase Kannada Serial
ಪಾರ್ಲರ್ ಹೆಸರು ಬದಲಾಯಿಸಿದಕ್ಕೆ ಅವರ ನಿಜ ರೂಪನ ನೋಡ್ಬಿಟ್ಟಿದೀನಿ ಏನೇನೋ ಅನ್ನಿಸಿಕೊಂಡಿದ್ದೀನಿ, ಹಾಗಿರುವಾಗ ಇವತ್ತು ನಿನ್ನ ಬಗ್ಗೆ ಏನಾದ್ರು ಗೊತ್ತಾಯ್ತು ಅಂದ್ರೆ ಅಷ್ಟೇ ನನ್ನ ಕಥೆ ಇಲ್ಲಿ ಬೇರೆ ಚಾಕು ಕತ್ತರಿ ಎಲ್ಲಾ ಇಟ್ಟಿದ್ದೀನಿ. ನಿಜ ಗೊತ್ತಾದ್ರೆ ಅವರು ನನ್ನ ಏನು ಮಾಡ್ತಾರೋ ಏನೋ ಅಂತ ಹೇಳ್ತಿರ್ತಾಳೆ. ಈ ಕಡೆ ಶಾಂತಿ ತುಂಬಾ ಹೊತ್ತು ಕಾದು ಕೂಡ ಇನ್ನು ಎಷ್ಟೊತ್ತಮ್ಮ ಕಾಯೋದು ನಾನು ಬಂದಿದ್ದೀನಿ ಅಂತ ಹೇಳಿದ್ಯಾ ಇಲ್ವಾ?ಇರು ನಾನೇ ಹೋಗಿ ನೋಡ್ತೀನಿ ಅಂತ ಒಳಗಡೆ ನುಗ್ಗಿಬಿಡ್ತಾರೆ. ಆ ಸ್ಟಾಫ್ ಹಿಂದೇನೆ ಬರ್ತಾ ಬೇಡ ಮೇಡಂ ಅವರು ಯಾರೇ ಬಂದ್ರು ಕೂಡ ಕಳಿಸಬೇಡ ಅಂತ ಹೇಳಿದ್ರು. ಹೋಗ್ಬೇಡಿ ಅಂತ ಹೇಳ್ತಿರ್ತಾಳೆ.
ಆಗ ಶಾಂತಿ ನೀನು ಹೋಗು ಆ ಕಡೆ ನಾನೇ ಅವಳ ಹತ್ರ ಮಾತಾಡ್ತೀನಿ ಅಂತ ಆ ಸ್ಟಾಫ್ ನ ತಳ್ಳಿ ಒಳಗಡೆ ಬಂದು ನೋಡಿದಾಗ ಪ್ರಮೀಳಗೆ ಮುಖ ಪೂರ್ತಿ ಫೇಸ್ ಪ್ಯಾಕ್ ಹಾಕಿಸಿ ಗುರುತೆ ಸಿಗದೆ ಇರೋ ತರ ಚೇರ್ ಮೇಲೆ ಕೂರಿಸಿರ್ತಾಳೆ ರೋಹಿಣಿ. ಶಾಂತಿನ ನೋಡಿದ ತಕ್ಷಣನೇ ಬನ್ನಿ ಅತ್ತೆ ನೀವಾ ಅದು ನಾನು ಬೇರೆ ಯಾರು ಅಂತ ಅನ್ಕೊಂಡಿದ್ದೆ.
ಬನ್ನಿ ಅತ್ತೆ ಏನಕ್ಕೆ ಇಲ್ಲಿಗೆ ಬಂದಿದ್ದೀರಾ ಅಂತ ಕೇಳ್ತಾಳೆ. ಆಗ ಶಾಂತಿ ಫಂಕ್ಷನ್ ಇತ್ತಲ್ಲ ಓಡಾಡಿ ಮೈಕೈ ಎಲ್ಲಾ ತುಂಬಾ ನೋಯಿತಿತ್ತಮ್ಮ ಅದಕ್ಕೆ ಮಸಾಜ್ ಮಾಡ್ಕೊಂಡು ಹೋಗೋಣ ಅಂತ ಬಂದೆ ಅಂತಾರೆ. ಆಗ ರೋಹಿಣಿ ಶಾಂತಿಗೆ ಡೌಟ್ ಬರಬಾರದು ಅಂತ 10 ನಿಮಿಷ ಇರಿ ಮೇಡಂ ಬರ್ತೀನಿ ಅಂತ ಪ್ರಮೀಳಗೆ ಹೇಳಿ ಬರ್ತಾಳೆ. ನಂತರ ಶಾಂತಿ ನಾನು ಮನೋಜ್ ಹೋಗಿ ಬಟ್ಟೆಗಳನ್ನೆಲ್ಲ ತಂದುಬಿಟ್ವಿ. ಹಾಗೆ ನಿಮ್ಮಪ್ಪನಿಗೆ ಅಂತ 2000 ದು ಕಾಸ್ಟ್ಲಿ ಶರ್ಟ್ ಬೇರೆ ತಂದಿದ್ದೀವಿ. ಅವರು ಮಲೇಷಿಯಾದಿಂದ ಹೊರಟ್ರು ತಾನೇ?ಅಂತ ಕೇಳ್ತಾರೆ. ಆಗ ರೋಹಿಣಿ ಹೂ ಅತ್ತೆ ನಾಳೆ ಬೆಳಗ್ಗೆನೆ ಫ್ಲೈಟ್, ಅಷ್ಟೊತ್ತಿಗೆ ಇಲ್ಲಿಗೆ ಬಂದ್ಬಿಡ್ತಾರೆ ಅತ್ತೆ. ಮತ್ತೆ ತಾಳಿ ಚೈನ್ ತಗೊಳೋದಕ್ಕೆ ಅಂತ ದುಡ್ಡು ಬೇರೆ ಕಳಿಸಿದ್ದಾರೆ, ಈಗ ತಾನೇ ವಿಥ್ಡ್ರಾ ಮಾಡ್ಕೊಂಡು ತಗೊಂಡು ಬಂದಿದ್ದೀನಿ ಅಂತ ಹೇಳಿ ಪ್ರಮಿಳ ಕೊಟ್ಟ ದುಡ್ಡನ್ನ ಶಾಂತಿ ಕೈಗೆ ತಂದು ಕೊಡ್ತಾಳೆ ರೋಹಿಣಿ.
Aase Kannada Serial
ಆಗ ಶಾಂತಿಗೆ ಖುಷಿಯಾಗಿ ನೋಡಿದ್ಯಾನಮ್ಮ ಅವರು ಬರೋದಕ್ಕೂ ಮುಂಚೆನೇ ನಿನಗೆ ದುಡ್ಡು ಕಳಿಸಿದ್ದಾರೆ ಅಂದ್ರೆ ಬೀಗರ್ಗೆ ನಿನ್ನ ಮೇಲೆ ಪ್ರೀತಿ ಇದೆ, ನೀನೇ ಅವರನ್ನ ಅರ್ಥ ಮಾಡ್ಕೋತಿಲ್ಲ ಅಷ್ಟೇ. ಹೌದು ನಿಮ್ಮಪ್ಪ ಮಾತ್ರ ಬರ್ತಿದ್ದಾರಾ ಇಲ್ಲ ಜೊತೆಗೆ ಆ ಟಿಕೆಟ್ ಕೂಡ ಬರ್ತಿದ್ದಾಳ ಅಂತ ಕೇಳ್ತಾರೆ. ಆಗ ರೋಹಿಣಿ ಯಾರತ್ತೆ ಅಂದಾಗ, ಅದೇನಮ್ಮ ನಿಮ್ಮಪ್ಪ ಹೊಸದಾಗಿ ಮದುವೆಯಾಗಿದ್ದಾರೆ ಅಂದಿಯಲ್ಲ ಆ ಹುಡುಗಿ ಅವಳೇ ಅಂತಾರೆ ಶಾಂತಿ. ಆಗ ರೋಹಿಣಿ ಇಲ್ಲ ಅತ್ತೆ ಅಪ್ಪ ಮಾತ್ರ ಬರ್ತಿರೋದು ಅಂತಾಳೆ. ಆಗ ಶಾಂತಿ ಒಳ್ಳೆದೇ ಆಯ್ತು, ಅವಳನ್ನೇನಾದ್ರೂ ಕರ್ಕೊಂಡು ಬಂದಿದ್ರೆ ನೋಡೋರಲ್ಲ ಏನ್ ಅಂತಿದ್ರು?ಏನೋ ನಿಮ್ಮ ಅಮ್ಮ ಇದ್ದಿದ್ರೆ ಅವರೇ ಬರ್ತಿದ್ರು, ಆದ್ರೆ ಏನ್ ಮಾಡೋದು ಅವರಂತೂ ಅಲ್ಪಾಯಸಲ್ಲೇ ಹೋಗ್ಬಿಟ್ರು ಅಂತಾರೆ. ಅದನ್ನ ಕೇಳಿ ಪ್ರಮೀಳಗೆ ಬೇಜಾರಾಗ್ತಿರುತ್ತೆ.
ರೋಹಿಣಿ ಕೂಡ ಅವರ ಅಮ್ಮನೇ ನೋಡ್ತಿರ್ತಾರೆ. ನಂತರ ಶಾಂತಿ ಪ್ರಮೀಳನ ಪಾರ್ಲರ್ ಕಸ್ಟಮರ್ ಅನ್ಕೊಂಡು ಹತ್ರ ಬಂದು ನಾನು ರೋಹಿಣಿ ಅತ್ತೆರಿ, ನಾಳೆ ಕರಿಮಣಿ ಶಾಸ್ತ್ರದ ಫಂಕ್ಷನ್ ಇಟ್ಕೊಂಡಿದ್ದೀವಿ ಇವರಪ್ಪ ಮಲೇಷಿಯಾದಿಂದ ಬರ್ತಿದ್ದಾರೆ. ಮಲೇಷಿಯಾದಲ್ಲಿ ಇವರಪ್ಪ ದೊಡ್ಡ ಸಾಹುಕಾರರು. ಆದರೆ ಪಾಪ ಇವಳಿಗೆ ಅಮ್ಮ ಇಲ್ಲ. ಕಾಯಿಲೆ ಬಂದು ಸತ್ತೋದ್ರಂತೆ.
ಅದರಿಂದ ಆಗಾಗ ರೋಹಿಣಿ ಅವರ ಅಮ್ಮನ ನೆನೆಸಿಕೊಂಡು ಬೇಜಾರು ಮಾಡ್ಕೋತಿರ್ತಾಳೆ, ಪಾಪ ಅದಕ್ಕೆ ನಾನು ರೋಹಿಣಿಗೆ ಅವರ ಅಮ್ಮ ಇಲ್ಲ ಅನ್ನೋ ಭಾವನೆ ಬರದೇ ಇರೋ ತರ ನೋಡ್ಕೋತಿದ್ದೀನಿ ಅಂತಾರೆ ಶಾಂತಿ. ಅದಕ್ಕೆ ಪ್ರಮಿಳ ಒಳ್ಳೆ ವಿಷಯನ ರೋಹಿಣಿ ಗೆ ನಿಮ್ಮ ತರ ಒಳ್ಳೆ ಅತ್ತೆ ಸಿಕ್ಕಿದ್ದಾರೆ. ಆದರೆ ಪಾಪ ಇದೆಲ್ಲ ಮಾಡೋದಕ್ಕೆ ಅವರ ಅಮ್ಮನಿಗೆ ಅದೃಷ್ಟ ಇಲ್ಲ ಅಂತ ಅಳ್ತಿರ್ತಾರೆ, ಅದನ್ನ ನೋಡಿ ಶಾಂತಿ ರೋಹಿಣಿ ಅವರ ಕಣ್ಣಲ್ಲಿ ನೀರು ಬರ್ತಿದೆ ನೋಡು, ಅಯ್ಯೋ ಯಾಕ್ರಿ ಅಳ್ತಿದ್ದೀರಾ ಅಂತ ಹತ್ರ ಹೋಗೋದಕ್ಕೆ ಹೋಗ್ತಾರೆ.
ಆಗ ರೋಹಿಣಿ ಶಾಂತಿನ ತಡೆದು ಅತ್ತೆ ಅತ್ತೆ ಕಣ್ಣೀರಲ್ಲ ಅತ್ತೆ, ಅದು ಸೌತೆಕಾಯಿ ಇಟ್ಟಿದ್ದೀನಲ್ಲ ಅದಕ್ಕೆ ಹೀಗೆ ಬರ್ತಿದೆ ಅಷ್ಟೇ ಅಂತಾಳೆ. ಆಗ ಶಾಂತಿ ರೋಹಿಣಿಗೆ ನನಗೂ ಮುಖಕ್ಕೆ ಹೀಗೆಲ್ಲ ಫೇಸ್ ಪ್ಯಾಕ್ ಹಾಕಮ್ಮ ನಾಳೆ ಫಂಕ್ಷನ್ ಇದ್ಯಲ್ಲ ಅಂತ ಅಲ್ಲೇ ಕೂತ್ಕೊಳ್ಳೋದಕ್ಕೆ ಹೋಗ್ತಾರೆ ಆಗ ರೋಹಿಣಿ ಅತ್ತೆ ಇಲ್ಲಿ ಬೇಡ ಅತ್ತೆ. ಇಲ್ಲಿ ತುಂಬಾ ಟೈಮ್ ಆಗುತ್ತೆ. ನಾನು ಮನೆಗೆ ಬಂದು ಮಾಡ್ತೀನಿ ಅಂತಾಳೆ. ಆಗ ಶಾಂತಿ ಅದು ಸರಿನೇ, ಸರಿನಮ್ಮ ನಾನು ಬರ್ತೀನಿ ಅಂತ ಅಲ್ಲಿಂದ ಖುಷಿಯಿಂದ ಹೋಗ್ತಾರೆ. ಶಾಂತಿ ಹೋದಮೇಲೆ ಪ್ರಮೀಳ ಹತ್ರ ರೋಹಿಣಿ ಬಂದು ಅಮ್ಮ ಅತ್ತೆ ಹೇಳಿದ್ದಕ್ಕೆ ಏನು ಬೇಜಾರ್ ಮಾಡ್ಕೋಬೇಡಮ್ಮ ಅಂದಾಗ, ನಾನೇನು ಅನ್ಕೊಳೋದಿಲ್ಲ ಬಿಡಮ್ಮ. ನಾನು ಮುಖ ತೊಳ್ಕೊಂಡು ಹೊರಡುತ್ತೀನಿ ಅಂತ ಹೋಗ್ತಾರೆ. ಇನ್ನೊಂದು ಕಡೆ ದೇವಸ್ಥಾನದ ಎದುರುಗಡೆ ಹೂ ಅಂಗಡಿಯಲ್ಲಿ ಕುಸುಮ ಮತ್ತೆ ಕನಕ ಇರ್ತಾರೆ.
Aase Kannada Serial
ಅಲ್ಲಿಗೆ ಮಂಜ ಬಂದು ಬಡ್ಡಿ ಕೊಟ್ಟೋದಕ್ಕೆ ದುಡ್ಡು ಕೇಳಿದ್ಯಲ್ಲ ತಗೊಳಮ್ಮ ಅಂತ ದುಡ್ಡು ಕೊಡ್ತಾನೆ. ಆಗ ಕುಸುಮ ಎಲ್ಲಿತ್ತೋ ಇಷ್ಟೊಂದು ದುಡ್ಡು ಅಂತ ಕೇಳಿದಾಗ, ಇವತ್ತು ಸಂಬಳ ಬಂತು ಅದೇ ಇದು ಅಂತ ಹೇಳ್ತಾನೆ ಮಂಜ, ಆಗ ಕನಕ ಕಾಗೆ ಸುಬ್ಬನ ಹತ್ರ ಕೆಲಸಕ್ಕೆ ಹೋಗ್ತಿದೆಯಲ್ಲ ಅವನು ಕೊಟ್ಟಿರೋ ದುಡ್ಡು ತಾನೇ ಇದು ಅಂದಾಗ, ನ್ಯಾಯವಾಗಿ ಸಂಪಾದನೆ ಮಾಡಿರೋ ದುಡ್ಡು ತಾನೇ? ಇನ್ನೇನು ಅಂತ ಮಂಜ ಹೇಳ್ತಾನೆ ಆಗ ಕುಸುಮ ಅಲ್ಲ ಕಣೋ ಅವನ ಹತ್ರ ಕೆಲಸಕ್ಕೆ ಹೋಗ್ಬೇಡ ಅಂತ ಎಷ್ಟು ಹೇಳಿದ್ರು ಕೂಡ ಕೇಳಲ್ಲ ಅಲ್ವಾ ನೀನು ಅಂದಾಗ, ಮಂಜ ಮತ್ತೆ ಮತ್ತೆ ಅದನ್ನೇ ಹೇಳ್ಬೇಡಮ್ಮ ಅಂತಿರ್ತಾನೆ ಅಷ್ಟೊತ್ತಿಗೆ ಅಲ್ಲಿಗೆ ಮೀನಾ ಬಂದು ಮಂಜ ಕೈ ಹೇಗಿದೆಯೋ ಅಂತ ಕೇಳಿದಾಗ, ಈಗ ಪರವಾಗಿಲ್ಲ ಅಕ್ಕ ಅಂತಾನೆ.
ಆಗ ಕನಕ ಏನಕ್ಕ ನಿನ್ನ ಅಂಗಡಿ ಬಿಟ್ಟು ಇಲ್ಲಿಗೆ ಬಂದಿದ್ದೀಯಾ ಅಂತ ಕೇಳಿದಾಗ, ಇಲ್ಲೇ ಒಂದು ಹಾರ ಡೆಲಿವರಿ ಕೊಡಬೇಕಿತ್ತು ಕನಕ ಅದನ್ನೇ ಕೊಟ್ಟು ಹೋಗೋಣ ಅಂತ ಇಲ್ಲಿಗೆ ಬಂದೆ ಈಗ ಹೋಗಿ ಅಂಗಡಿ ತೆಗಿಬೇಕು ಅಂತಾಳೆ ಮೀನಾ. ಆಗ ಕುಸುಮ ಮೀನಾ ಅಳಿಯಂದರು ಬರಲಿಲ್ವೇನೆ ಅಂತ ಕೇಳಿದಾಗ, ಅವರು ಯಾಕೆ ಇಲ್ಲಿಗೆ ಬರಬೇಕು ಅಂತ ಮಂಜ ಕೇಳ್ತಾನೆ. ಆಗ ಕುಸುಮ ಯಾಕೋ ಹೀಗೆ ಕೇಳ್ತಿದ್ದೀಯಾ ಅಂದಾಗ, ಅವರೇ ತಾನೇ ಅಕ್ಕನಿಗೆ ನಮ್ಮನ್ನ ನೋಡೋಕೆ ಹೋಗಬಾರದು ಅಂತ ಹೇಳಿರೋದು ಅಂತಾನೆ ಮಂಜ.
ಆಗ ಕನಕ ಅವರು ಹೇಳಿರೋದು ನಮ್ಮನ್ನಲ್ಲ ನಿನ್ನನ್ನು ನೋಡೋಕೆ ಹೋಗಬಾರದು ಅಂತ ಹೇಳಿರೋದು ಅಂದಾಗ, ಏನೋ ಒಂದು ಹಾಗಿರುವಾಗ ಅವರು ಮಾತ್ರ ಯಾಕೆ ಇಲ್ಲಿಗೆ ಬರಬೇಕು ಅಂತಾನೆ ಮಂಜ. ಆಗ ಕುಸುಮ ಮಂಜ ಬಿಟ್ಬಿಡು ಏನೋ ಆಗ್ಬಾರದು, ಆಗೋಯ್ತು ಇನ್ನು ನೀನು ಕೋಪದಲ್ಲೇ ಇದ್ರೆ ಯಾರಿಗೆ ಯಾವ ಪ್ರಯೋಜನನು ಇಲ್ಲ ಅಂತಾರೆ. ಆಗ ಮೀನಾ ಅದಕ್ಕೆ ನಾನು ಅವರ ಹತ್ರ ಈ ವಿಷಯ ಮಾತಾಡೋದೇ ಬಿಟ್ಬಿಟ್ಟಿದೀನಿ. ಇತ್ತೀಚೆಗೆ ಅವರಿಗೂ ಕೂಡ ಕೋಪ ಕಮ್ಮಿಯಾಗಿ ಮೊದಲಿನ ತರ ಮಾತಾಡ್ತಿದ್ದಾರೆ.
ಪಾಪ ನಮ್ಮ ಅವರು ಈ ಕಾಗೆ ಸುಬ್ಬ ಮಾಡಿದ ಕೆಲಸದಿಂದ ಅವರು ಕಾರ್ ಮಾರ್ಬಿಟ್ರು ಅಂತಾಳೆ. ಆಗ ಮಂಜ ಸುಬ್ಬ ಏನು ಕಾರ್ ಮಾರೋದಕ್ಕೆ ಹೇಳಿರಲಿಲ್ಲವಲ್ಲ ಅಂದಾಗ, ಹೌದು ಅವನು ಕಾರ್ ಮಾರೋದಕ್ಕೆ ಹೇಳಿರಲಿಲ್ಲ ಆದ್ರೆ ಅವನ ಹತ್ರ ಹೋಗಿ ಕಾಲಿಗೆ ಬಿದ್ದು ಕ್ಷಮೆ ಕೇಳ್ಬೇಕು ಅಂತ ಹೇಳಿದ್ನಂತಲ್ಲ? ಅದಕ್ಕೆ ಹೋಗಿ ಸರಿಯಾಗಿ ಉಗಿದು ಬಂದಿದ್ದೀನಿ, ಹೇಳಿಲ್ವಾ ನಿನಗೆ ಅಂತಾಳೆ ಮೀನಾ.
ಆಗ ಮಂಜ ಹೌದು ಹೇಳ್ದ. ನೀನು ಯಾಕ ಅವ್ನ ಹೋಗಿ ಬೈದು ಬಂದೆ ಅಂತ ಕೇಳಿದಾಗ, ಬೈದು ಅಷ್ಟಕ್ಕೆ ಬಿಟ್ಟು ಬಂದಿದ್ದೀನಿ ಅಂತ ಸಂತೋಷ ಪಡು ಇನ್ಮೇಲೆ ಅವರ ದಾರಿಗೆ ಏನಾದ್ರೂ ಅವನು ಬಂದ್ರೆ ನನ್ನ ಕೈಯಲ್ಲಿ ಚೆನ್ನಾಗಿ ತಿಂತಾನೆ ಅವನು ಅಂತ ಹೇಳ್ಬಿಡು ಅವನ ಹತ್ರ ಕೆಲಸಕ್ಕೆ ಹೋಗ್ಬೇಡ ಅಂದ್ರು ಕೂಡ ನೀನು ಕೇಳ್ತಿಲ್ಲ ಅಲ್ಲ ಅವನ ಜೊತೆ ಸಹವಾಸ ಮಾಡ್ತಿದ್ದೀಯಾ ಅದು ನಿನ್ನ ಎಲ್ಲಿಗೆ ಕರ್ಕೊಂಡು ಹೋಗಿ ನಿಲ್ಸುತ್ತೋ ಅಂತ ಭಯ ಆಗ್ತಿದೆ ನನಗೆ ಅಂತಾಳೆ ಮೀನಾ.
ಆಗ ಮಂಜ ಈಗೇನು ಮತ್ತೆ ನನಗೆ ಬುದ್ದಿ ಹೇಳು ಅಂತ ನಿನ್ನ ಗಂಡ ಹೇಳಿ ಕಳಿಸಿದ್ರಾ ಅಂದಾಗ, ಹೂ ಕಣೋ ಅವರಿಗೆ ಬೇರೆ ಕೆಲಸ ಇಲ್ಲ ನೋಡು ಯಾರಾದ್ರೂ ಏನಾದರೂ ಹೇಳಿದ್ರೆ ನೀನು ಹಾಗೆ ಕೇಳ್ಬಿಡ್ತೀಯಾ ಅಂತ ಬೈತಿರ್ತಾಳೆ ಮೀನಾ. ಆಗ ಕುಸುಮ ಮೀನನ್ನ ತಡೆದು ಅದೆಲ್ಲ ಬಿಡು, ಮನೆಯಲ್ಲಿ ಏನೋ ವಿಶೇಷ ಇದೆ ಅಂತ ಫೋನ್ ಮಾಡಿದಾಗ ಹೇಳಿದ್ಯಲ್ಲ ಏನದು ಅಂದಾಗ, ಹೌದಮ್ಮ ಶ್ರುತಿಗೂ ರೋಹಿಣಿಗೂ ಕರಿಮಣಿ ಶಾಸ್ತ್ರ ಮಾಡ್ತಿದ್ದಾರೆ ಅಂತ ಮೀನಾ ಹೇಳ್ತಾಳೆ. ಆಗ ಕುಸುಮ ನಿಮ್ಮ ಮನೆಯಲ್ಲೇ ಮಾಡ್ತಿದ್ದಾರೆ ಅಂದಾಗ ಇಲ್ಲಮ್ಮ ಮಂಟಪದಲ್ಲಿ ಮಾಡ್ತಿದ್ದಾರೆ. ಅದಕ್ಕೆ ನನ್ನ ಗಂಡ ಬರಬಾರದು ಅಂತ
ನಮ್ಮ ಅತ್ತೆ ಹೇಳಿದ್ರು ಅಂತ ಮೀನಾ ಹೇಳ್ತಾಳೆ. ಆಗ ಕುಸುಮ ಇದೇನಮ್ಮ ಇದು ? ಅವರ ಮಗ ಬರಬಾರದು ಅಂತ ಅವರೇ ಹೇಳ್ತಿದ್ದಾರೆ ಅಂದಾಗ, ಇವರು ಬಂದ್ರೆ ಏನಾದ್ರೂ ಜಗಳ ಆಗುತ್ತೆ ಅಂತ ಶ್ರುತಿ ಅವರ ಅಮ್ಮ ನಮ್ಮ ಅತ್ತೆ ಹತ್ರ ಹೇಳಿದ್ದಾರೆ ಅನ್ಸುತ್ತೆ ಅಂತ ಹೇಳ್ತಾಳೆ ಮೀನಾ. ಅದಕ್ಕೆ ಮಂಜ ಸರಿಯಾಗಿ ತಾನೇ ಹೇಳಿದ್ದಾರೆ,ನಿನ್ನ ಗಂಡ ಎಲ್ಲಿಗೆ ಹೋದ್ರು ಜಗಳ ತಾನೇ ಮಾಡೋದು.
ಅಷ್ಟೇ ಯಾಕೆ ಅವತ್ತು ಅಪ್ಪನ ಕಾರ್ಯದಲ್ಲೂ ಬಂದು ನನ್ನ ಹೊಡೆದು ಬಿಟ್ಟು ತಾನೇ ಹೋದ್ರು ಅಂತಾನೆ ಆಗ ಕನಕ ಅವತ್ತು ನೀನು ಜಾಸ್ತಿನೇ ಮಾತಾಡಿದೆ ಇಬ್ಬರ ಮೇಲು ತಪ್ಪಿದೆ ಸುಮ್ನೆ ಇರು ಅಂತಾಳೆ. ಆಗ ಕುಸುಮ ಹಾಗಾದ್ರೆ ಅಳಿಯ ಅಂದ್ರು ಹೋಗಲ್ವಾ ಅಂತ ಕೇಳ್ದಾಗ, ಬರ್ತಾರಮ್ಮ ಅವರು ಬರ್ಲಿಲ್ಲ ಅಂದ್ರೆ ನಾನು ಮಾವ ಬರಲ್ಲ ಅಂತ ಹೇಳಿದ್ವಿ ಅದಕ್ಕೆ ಹೇಗೋ ಒಪ್ಕೊಂಡ್ರು ಮಾವ ಕೂಡ ನಿಮ್ಮನ್ನೆಲ್ಲ ಕರೀತೀನಿ ಅಂತ ಹೇಳಿದ್ರು ಆದ್ರೆ ನಾನೇ ಬೇಡ ಅಂತ ಹೇಳ್ದೆ ಅಂತಾಳೆ ಮೀನಾ.
ಆಗ ಕನಕ ಯಾಕಕ್ಕ ನಾವು ಅಲ್ಲಿಗೆ ಬರೋದು ನಿನಗೆ ಇಷ್ಟ ಇಲ್ವಾ ಅಂದಾಗ, ಹಾಗಲ್ಲ ಕನಕ ಅಲ್ಲಿ ಏನು ಜಗಳ ಆಗುತ್ತೋ ಅಂತ ಮೊದಲೇ ಭಯ ಆಗ್ತಿದೆ ನನಗೆ. ಇನ್ನು ನೀವೇನಾದ್ರೂ ಬಂದು ಏನಾದ್ರೂ ಆದ್ರೆ ಎಲ್ಲದಕ್ಕೂ ನೀವೇ ಕಾರಣ ಅಂದ್ಬಿಡ್ತಾರೆ ಅತ್ತೆ, ಅದಕ್ಕೆ ಅಂದಾಗ, ಕುಸುಮ ಹೌದು ಕಣೆ ಯಾಕೆ ನಿಮ್ಮ ಅತ್ತೆ ಹಾಗೆ ಕನಕ ನಿಮ್ಮ ಮನೆಗೆ ಹಾರ ಕಟ್ಟೋದಕ್ಕೆ ಅಂತ ಬಂದಾಗ ರವಿ ಮತ್ತೆ ಕನಕನ ಬಗ್ಗೆ ಏನೋ ಮಾತಾಡಿದ್ರಂತೆ ಅಂದಾಗ, ಬಿಡಮ್ಮ ಅದೆಲ್ಲ ಅವರು ಹಾಗೆ ಮಾತಾಡಿದಕ್ಕೆ ಶ್ರುತಿ ಸರಿಯಾಗಿ ಕೇಳಿದ್ರು ಅವರ ಅತ್ತೆನ ಅಂತಾಳೆ ಕನಕ.
ಆಗ ಮಂಜು ನಾವೆಲ್ಲ ಬಡವರು ಶ್ರುತಿ ಅವರ ಅಪ್ಪ ಅಮ್ಮ ಶ್ರೀಮಂತರು. ಅದಕ್ಕೆ ಹೀಗೆ ನಮ್ಮನೆಲ್ಲ ಅವರು ಕೀಳಾಗಿ ನೋಡೋದು ಒಂದಲ್ಲ ಒಂದು ದಿನ ನಾನು ಚೆನ್ನಾಗಿ ಸಂಪಾದನೆ ಮಾಡಿ ತೋರಿಸ್ತೀನಿ ಅಂತ ಹೇಳಿದ್ರೆ ಅಲ್ಲಿಂದ ಹೋಗ್ತಾನೆ ಮಂಜ. ಆಗ ಮೀನಾ ಏನಮ್ಮ ಇವನು ಈ ನಡುವೆ ಹೀಗೆ ಆಡ್ತಿದ್ದಾನೆ ಅಂದಾಗ, ಇನ್ನು ಚಿಕ್ಕವನು ಕಣೆ ಬಿಡೆ,ಹೋಗ್ತಾ ಹೋಗ್ತಾ ಸರಿ ಹೋಗ್ತಾನೆ ಅಂತಾರೆ ಕುಸುಮ. ಇಲ್ಲಿಗೆ ಈ ಸಂಚಿಕೆ ಮುಕ್ತಾಯವಾಗುತ್ತದೆ