ಕಳೆದ 2023-24 ರ ಮುಂಗಾರು ಹಂಗಾಮಿನಲ್ಲಿ ಮಳೆಯಾಗದ ಕಾರಣ ಜಿಲ್ಲೆಯ ಎಲ್ಲಾ 11 ತಾಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ 2,63,393 ರೈತರಿಗೆ 274.51 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ಬರ ಪರಿಹಾರ ನೀಡಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರಿಂದ, ಅನುಮೋದಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರಾಗಿ ನೋಂದಣಿಯಾಗಿರುವ ಮತ್ತು ಪ್ರೂಟ್ಸ್ ಐಡಿ ಹೊಂದಿರುವ 2,82,010 ರೈತರು ಈಗಾಗಲೇ ಎಸ್‌ಡಿಆರ್‌ಎಫ್ ಮಾನದಂಡಗಳಿಗೆ ಅನುಗುಣವಾಗಿ ಡಿಬಿಟಿ ಮೂಲಕ ಮೊದಲ ಖರೀದಿಯಾಗಿ 56.02 ಕೋಟಿ ರೂ.ಗಳ ಬೆಳೆ ಹಾನಿ ಪರಿಹಾರವನ್ನು ಪಡೆಯಲಿದ್ದಾರೆ. ಈ ಮಾಹಿತಿಯು ಬೆಳೆ ಸಮೀಕ್ಷೆಯ ಡೇಟಾವನ್ನು ಆಧರಿಸಿದೆ. ಇಂದು ಮಂಜೂರಾದ ಮಂಜೂರಾತಿ ಸೇರಿದಂತೆ ಜಿಲ್ಲೆಯ 2,82,010 ರೈತರಿಗೆ ಒಟ್ಟು 330.53 ಕೋಟಿ ರೂಪಾಯಿ ರೈತರ ಖಾತೆಗೆ ಬರಲಿದೆ ಎಂದು ತಿಳಿಸಿದರು.
ಬೆಳೆ ಹಾನಿ ಪರಿಹಾರದ ಹಣ ಸಿಗದ ರೈತರಿಗೆ ಅನುಕೂಲವಾಗಲು ತಮ್ಮ ದೂರು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲೆ ಮತ್ತು ತಾಲೂಕುವಾರು ಸಹಾಯವಾಣಿ ತೆರೆಯಲಾಗಿದೆ. ರೈತರು ಕಚೇರಿ ಸಮಯದಲ್ಲಿ ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ | Bele Hani Parihara
ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೀಗೆ ಪರಿಶೀಲಿಸಿ
ಮೊದಲಿಗೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://parihara.karnataka.gov.in/service92/
ಅಲ್ಲಿ ವರ್ಷದಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಮುಂಗಾರು ಆಯ್ಕೆ ಮಾಡಿ, ವಿಪತ್ತು ಮಾಡಿ ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಿ
ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಿ, ಸರ್ ನಾಕ್ ಮತ್ತು ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಸಿಗುತ್ತದೆ.
ಗ್ರಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಮಹಿಳೆಯರಿಗೆ ಇನ್ಮುಂದೆ ಮಾಸಿಕ 2,000 ಹಣದೊಂದಿಗೆ 800 ಹೆಚ್ಚುವರಿ ಹಣ ಕೂಡಲೇ ಅರ್ಜಿ ಸಲ್ಲಿಸಿ | Manaswini Scheme |
ಬರ ಪರಿಹಾರ ಸಹಾಯವಾಣಿ ಸಂಖ್ಯೆಗಳ ಮಾಹಿತಿ ಈ ಕೆಳಗಿನಂತಿದೆ
ಜಿಲ್ಲಾಧಿಕಾರಿ ಕಚೇರಿ :1077
ಆಳಂದ ತಾಲೂಕು : 9845858252
ಅಫಜಲಪುರ ತಾಲೂಕು 7760208044, 7760605777.
ಚಿತ್ತಾಪುರ ತಾಲೂಕು: 08474 236250,
ಚಿಂಚೋಳಿ ತಾಲೂಕು: 08475 200138, ಅಥವಾ 200127 ಗೆ ಸಂಪರ್ಕಿಸಬೇಕು
ಕಾಳಗಿ ತಾಲೂಕು: 9243866424,
ಕಲಬುರಗಿ ತಾಲೂಕು : 08472 278636, 9880683702,
ಕಮಲಾಪುರ ತಾಲೂಕು : 08478200144,
ಜೇವರ್ಗಿ ತಾಲೂಕು : 7441843393 ಅಥವಾ 7019270898
ಯಡ್ರಾಮಿ ತಾಲೂಕು : 9743682346
ಶಹಾಬಾದ್ ತಾಲೂಕು : 08474295910
ಸೇಡಂ ತಾಲೂಕು : 9741680444, 9449309308, 9448786422 ಹಾಗೂ 08411 276184 ಗೆ ಸಂಪರ್ಕಿಸಲು ಕೋರಲಾಗಿದೆ.
ಕರ್ನಾಟಕ ಶ್ರಮ ಶಕ್ತಿ ಯೋಜನೆಯಿಂದ 50,000 ಸಾಲ ಮತ್ತು ಸಬ್ಸಿಡಿ..! ಈಗಲೇ ಅರ್ಜಿ ಸಲ್ಲಿಸಿ (Shrama Shakti Scheme)
ಬೆಳೆ ಹಾನಿ ಪರಿಹಾರ ಪಡೆಯಲು ಫ್ರೂಟ್ಸ್ ನೋಂದಣಿ ಕಡ್ಡಾಯವಾಗಿರುವುದರಿಂದ ರೈತಮಿತ್ರರು ಆ ಕೆಲಸವನ್ನು ಮೊದಲಿಗೆ ಮಾಡಬೇಕು. ಇಲ್ಲದಿದ್ದರೆ ಅಂತಹ ರೈತರು ಬೆಳೆ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎಂದು ತಿಳಿಸಲಾಗಿದೆ.