ಕರ್ನಾಟಕ ರಾಜ್ಯದ ಎಲ್ಲ ರೈತ ಮಿತ್ರರಿಗೂ ನಮ್ಮ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಇವತ್ತಿನ ಈ ಲೇಖನದಲ್ಲಿ 2023-2024 ಅಲ್ಲಿ ನಿಗದಿಪಡಿಸಿದ ಬೆಳೆ ಹಾನಿ ಪರಿಹಾರದ ಬಗ್ಗೆ ಮಾಹಿತಿ ಕೊಡಲಿದ್ದೇವೆ.
ಹೌದು ರೈತ ಮಿತ್ರರೇ 2023-2024 ರಲ್ಲಿ ಮುಂಗಾರಿನ ಮಳೆಯಿಂದಾಗಿ ರಾಜ್ಯದ ಹೆಚ್ಚಿನ ರೈತರ ಎಲ್ಲ ಬೆಳೆಗಳು ಹಾನಿಯಾಗಿದ್ದವು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರವು ಒಟ್ಟು 223 ತಾಲೂಕುಗಳನ್ನು ಬರಪೀಡಿತ ರಾಜ್ಯಗಳೆಂದು ಘೋಷಿಸಿ, ಬೆಲೆ ಹಣ್ಣಿ ಪರಿಹಾರಕ್ಕಾಗಿ ಕೇಂದ್ರಸರ್ಕಾರಕ್ಕೆ ಅರ್ಜಿಸಲ್ಲಿಸಿತ್ತು.
Bele Hani Parihara List 2023-24
ಇದರ ಪ್ರಯುಕ್ತ ಸುಪ್ರೀಂ ಕೋರ್ಟ್ ಮೊರೆಹೋದ ಕೇಂದ್ರಸರ್ಕಾರವು ಈಗ 3454 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ರೈತರ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆ.
ಬೆಳೆ ಹಾನಿ ಪರಿಹಾರ ಹಣ ಚೆಕ್ ಮಾಡುವ ವಿಧಾನ
- ಮೊದಲಿಗೆ ಈ ಲಿಂಕ್ನ ಮುಖಾಂತರ click link parihara karnataka ಅಧಿಕೃತ ಜಾಲತಾಣಕ್ಕೆ ಹೋಗಿ.
- ನಂತರ ಅಲ್ಲಿ ವರ್ಷವನ್ನು ಆಯ್ಕೆ ಮಾಡಿ (2023-24).
- ಈಗ ಋತು ವನ್ನು ಮುಂಗಾರು ಎಂದು ಹಾಗು calamity ವಿಧ drought/ ಬರ ಎಂದು ಆಯ್ಕೆ ಮಾಡಿ.
- ನಂತರ ನಿಮ್ಮ ಜಿಲ್ಲೆ, ತಾಲೂಕು ಹಾಗೂ ಹೋಬಳಿ ನಮೂದಿಸಿ.
- ಈಗ ನಿಮ್ಮ ಗ್ರಾಮವನ್ನು ನಮೂದಿಸಿ.
ಇದನ್ನೂ ಓದಿ : Sukanya Samriddhi Yojana In Kannada | ಸುಕನ್ಯಾ ಸಮೃದ್ಧಿ ಯೋಜನೆ
ಇಷ್ಟಾದ ನಂತರ get report / ವರದಿ ಪಡೆಯಿರಿ icon ಅನ್ನು ಕ್ಲಿಕ್ ಮಾಡಿ. ಆಗ ಬೆಲೆ ಹನಿ ಪರಿಹಾರ ಜಮಾ ಆಗಿರುವ ನಿಮ್ಮ ಹಳ್ಳಿಯ ಸಂಪೂರ್ಣ ವಿವರದ ಪಟ್ಟಿ ನಿಮಗೆ ದೊರೆಯುತ್ತದೆ. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ರೈತ ಮಿತ್ರರ ಹೆಸರನ್ನು ನೀವು ಮಾಹಿತಿ ಪಡೆಯಬಹುದು.
Bele Hani Parihara Link: https://parihara.karnataka.gov.in/service89/PaymentDetailsReport.aspx