ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ (Crop Insurance)
ಪ್ರಿಯ ರೈತ ಬಾಂಧವರೇ 2022-23ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ, ಮಧ್ಯಂತರ ವಿಮಾ ಪರಿಹಾರ ಬಿಡುಗಡೆಯಾಗಿದೆ. ಇದು ಶೀಘ್ರದಲ್ಲಿ ನಿಮ್ಮ(ರೈತರ) ಖಾತೆಗಳಿಗೆ ಜಮೆಯಾಗಲಿದೆ. ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಧಾರವಾಡ ಜಿಲ್ಲೆಯ 63,609 ರೈತರಿಗೆ ಮಧ್ಯಂತರ ಬೆಳೆ ವಿಮೆ ಹಣ ಬಿಡುಗಡೆಮಾಡಲಾಗುತ್ತಿದೆ. ಇದರ ಪ್ರಕ್ರಿಯೆ ಆಗಲೇ ಶುರುವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ರೈತರು ಖಾತೆಗಳಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಲಿದೆ.
2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಕೆಲವು ಬೆಳೆಗಳು ಹಾನಿಗೀಡಾಗಿದ್ದವು. ಅವೆಂದರೆ ಅಲೂಗಡ್ಡೆ, ಕೆಂಪು ಮಣಸಿನಕಾಯಿ, ಹತ್ತಿ, ಗೋವಿನಜೋಳ ಹಾಗೂ ಶೇಂಗಾ. ಈ ಐದು ಬೆಳೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. ಆದರೆ ಇವುಗಳನ್ನು ಹೊರತು ಪಡಿಸಿ ಇನ್ನುಳಿದ ಬೆಳೆಗಳಿಗೆ ಬೆಳೆ ಕಟಾವು ಸಮೀಕ್ಷೆ ಆಧಾರದಲ್ಲಿ ಇತ್ಯರ್ಥಗೊಳಿಸಿ ಬೆಲೆ ಪರಿಹಾರ ಕ್ರಿಯೆ ಪ್ರಾರಂಭ ಗೊಂಡಿದೆ. ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪರಿಹಾರ ಸಂದಾಯ ಮಾಡುವಂತೆ ಕೃಷಿ ಇಲಾಖೆಗೂ ಕಂಪೆನಿಯ ಉನ್ನತ ಅಧಿಕಾರಿಗಳಿಗೂ ಸೂಚಿಸಲಾಗಿದೆ.
ಈ ಐದು ಬೆಳೆ ಹಾನಿಗೀಡಾದ ರೈತರಿಗೆ ಮಧ್ಯಂತರ ವಿಮಾ ಪರಿಹಾರದಲ್ಲಿ (ಮಿಡ್ ಸೀಸನ್ ಅಡ್ವರ್ಸಿಟಿ) ಜಿಲ್ಲಾಡಳಿತ ನೀಡಿದ್ದ ಪ್ರಸ್ತಾವನೆಯಂತೆ 57 ಕೋಟಿ ರೂ. ಮಧ್ಯಂತರ ವಿಮಾ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.ಇದು ಅತಿ ಶೀಘ್ರದಲ್ಲಿ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಜಮೆ ಯಾಗಲಿದೆ.
ಶೀಘ್ರದಲ್ಲಿ ರೈತರ ಖಾತೆಗೆ ಮುಂಗಾರಿ ಹಂಗಾಮಿನ ಮಧ್ಯಂತರ ಬೆಳೆ ವಿಮೆ ಬಿಡುಗಡೆ
ಇಲ್ಲಿ ಒಂದು ಗಮನದಲ್ಲಿಡಬೇಕಾದ ವಿಷಯವೆಂದರೆ ನೀವು ಯಾವುದೇ ಬೆಳೆಯನ್ನು ಸರಿಯಾಗಿ ವಿಮೆ ಮಾಡಿಸಬೇಕು ಹಗೆಗೆ ಅದೇ ಬೆಳೆಯನ್ನು ಸಮೀಕ್ಷೆ ಮಾಡಿಸಬೇಕು. ನೀವು ಒಂದುವೇಳೆ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆಗೆ ಇನ್ಶೂರೆನ್ಸ್ ಮಾಡಿಸಿದ್ದರೆ ನೀವು ಅದೇ ಬೆಳೆಯನ್ನು ಬೆಳೆಸಬೇಕು ಮತ್ತು ಸಮೀಕ್ಷೆಯನ್ನು ಮಾಡಿಸಿರಬೇಕು.
ಉದಾಹರಣೆಗೆ ನೀವು ಆಲೂಗಡ್ಡೆಗೆ ವಿಮೆ ಮಾಡಿಸಿ ಶೇಂಗಾ ಬೆಳೆಗೆ ಸಮೀಕ್ಷೆ ಮಾಡಿಸಿದ್ದರೆ ನಿಮಗೆ ಯಾವುದೇ ಪರಿಹಾರ ದೊರಕುವುದಿಲ್ಲ. ನೀವು ಆಲೂಗಡ್ಡೆಗೆ ವಿಮೆಮಾಡಿಸಿದ್ದಲ್ಲಿ ಅದೇ ಬೆಳೆಗೆ ಸಮೀಕ್ಷೆನಡೆಸಬೇಕು. ಒಂದು ವೇಳೆ ಆ ಬೆಳೆ ಹಾನಿಗೊಳಗಾದರೆ ನಿಮಗೆ ಪರಿಹಾರ ದೊರಕುತ್ತದೆ.