ಹಲೋ ಸ್ನೇಹಿತರೆ 10ನೇ ತರಗತಿ ಪಾಸಾದವರಿಗೆ ನಲ್ಲಿ ಡಿ ಸಿ ಸಿ ಬ್ಯಾಂಕ್ನಲ್ಲಿ 52 ಸಾವಿರ ರೂ. ವೇತನದ ಉದ್ಯೋಗಾವಕಾಶವಿದೆ.
Bangalore DCC Bank Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧಿಕೃತ ವೆಬ್ಸೈಟ್ bengalurudccbank.com ಗೆ ಭೇಟಿ ನೀಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ಲೇಖನವನ್ನು ಓದಿ.
Bangalore DCC Bank Recruitment 2023: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ (BDCCB) ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸ್ಟೆನೋಗ್ರಾಫರ್, ಕಂಪ್ಯೂಟರ್ ಆಪರೇಟರ್, ಡ್ರೈವರ್, ಜೆಎ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧಿಕೃತ ವೆಬ್ಸೈಟ್ bengalurudccbank.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇದನ್ನು ಓದಿ.
ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ :
ಬ್ರಾಂಚ್ ಮ್ಯಾನೇಜರ್ ಹುದ್ದೆ – 4
ಹಿರಿಯ ಸಹಾಯಕ ಹುದ್ದೆ- 19
ಸ್ಟೆನೋಗ್ರಾಫರ್ಸ್ ಹುದ್ದೆ- 1
ಕಿರಿಯ ಸಹಾಯಕರು ಹುದ್ದೆ- 43
ಕಂಪ್ಯೂಟರ್ ಆಪರೇಟರ್ ಹುದ್ದೆ- 2
ಚಾಲಕ ಹುದ್ದೆ- 4
ಗ್ರೂಪ್ ಡಿ ಹುದ್ದೆ – 23
ಒಟ್ಟು ಹುದ್ದೆಗಳ ಸಂಖ್ಯೆ- 96
ಅರ್ಹತಾ ಮಾನದಂಡಗಳು ಹೀಗಿವೆ :
ಬ್ರಾಂಚ್ ಮ್ಯಾನೇಜರ್, ಹಿರಿಯ ಸಹಾಯಕ ಹುದ್ದೆಗೆ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸ್ಟೆನೋಗ್ರಾಫರ್ಸ್ ಹುದ್ದೆಗೆ ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ನ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕಿರಿಯ ಸಹಾಯಕ ಹುದ್ದೆಗೆ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಚಾಲಕ, ಗುಂಪು ಡಿ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ ಈ ಕೆಳಗಿನಂತಿದೆ :
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಮೇಲಿನ ಹುದ್ದೆಗಳಿಗೆ ಕನಿಷ್ಠ 18 ರಿಂದ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿದೆ. ಹಾಗೆಯೆ SC/ST ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ (Application Fee):
ಸಾಮಾನ್ಯ(ಜನರಲ್), 2A, 2B, 3A, 3B ಅಭ್ಯರ್ಥಿಗಳಿಗೆ ರೂ.1500/- ಹಾಗೂ SC/ST ಅಭ್ಯರ್ಥಿಗಳಿಗೆ ರೂ.750/- ಅರ್ಜಿ ಶುಲ್ಕವಿದೆ.
ಆಯ್ಕೆ ಪ್ರಕ್ರಿಯೆ (ಸೆಲೆಕ್ಷನ್ ಪ್ರೋಸೆಸ್):
ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಿಗದಿತ ಅರ್ಹತಾ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ತೇರ್ಗಡೆ ಗೊಂಡವರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Sukanya Samriddhi Yojana In Kannada | ಸುಕನ್ಯಾ ಸಮೃದ್ಧಿ ಯೋಜನೆ
ವೇತನ (salary) ಈ ಕೆಳಗಿನಂತಿದೆ:
ಬ್ರಾಂಚ್ ಮ್ಯಾನೇಜರ್ ಹುದ್ದೆಗೆ – ರೂ. 40900 ರಿಂದ 78200/-
ಹಿರಿಯ ಸಹಾಯಕ ಹುದ್ದೆಗೆ – ರೂ. 37900 ರಿಂದ 70850/-
ಸ್ಟೆನೋಗ್ರಾಫರ್ಸ್ ಹುದ್ದೆಗೆ – ರೂ. 37900 ರಿಂದ 70850/-
ಕಂಪ್ಯೂಟರ್ ಆಪರೇಟರ್ ಹುದ್ದೆಗೆ – ರೂ.30350 ರಿಂದ 58250/-
ಹಿರಿಯ ಸಹಾಯಕರು ಹುದ್ದೆಗೆ – ರೂ.30350 ರಿಂದ 58250/-
ಚಾಲಕ ಹುದ್ದೆಗೆ – ರೂ. 27650 ರಿಂದ 52650/-
ಗುಂಪು ಡಿ ಹುದ್ದೆಗೆ – ರೂ. 23500 ರಿಂದ 47650/-
ಪ್ರಮುಖ ದಿನಾಂಕಗಳು :
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಫೆಬ್ರವರಿ 28, 2023 ಕೊನೆಯ ದಿನಾಂಕ.
ಅರ್ಜಿ ಹೀಗೆ ಸಲ್ಲಿಸಿ:
ಈ ಮೇಲಿನ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಈ ಪಿಡಿಎಫ್ ಫೈಲ್ ಅನ್ನು ಕ್ಲಿಕ್ ಮಾಡಿ.