ಹವಾಮಾನ ಬದಲಾದಾಗಲೆಲ್ಲ ಶೀತ, ತಲೆನೋವು, ಗಂಟಲು ನೋವು ಬರುವುದು ಸಾಮಾನ್ಯ. ಸೋಂಕಿನಿಂದ ಸಹ ಇದು ಸಂಭವಿಸುತ್ತದೆ. ಆದರೆ ಹೆಚ್ಚಿನ ಗಂಟಲು ನೋವು ವೈರಸ್‌ಗಳಿಂದ ಉಂಟಾಗುತ್ತದೆ. ಇದಲ್ಲದೆ, ಟಾನ್ಸಿಲ್ಗಳು ಗಲಗ್ರಂಥಿಯ ಉರಿಯೂತಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಗಂಟಲು ನೋವು ಮೂರರಿಂದ ನಾಲ್ಕು ದಿನಗಳಲ್ಲಿ ವಾಸಿಯಾಗುತ್ತದೆ. ಆದರೆ ಇದಕ್ಕಾಗಿ ಮನೆಮದ್ದುಗಳನ್ನು ತೆಗೆದುಕೊಂಡರೆ ಗಂಟಲು ನೋವು ಬೇಗ ಗುಣವಾಗುತ್ತದೆ.
ಗಂಟಲು ನೋವಿಗೆ ಮನೆಮದ್ದುಗಳು: (Gantalu Novu Mane Maddu )
೧. ಶುಂಠಿ ಚಹಾ ಅಥವಾ ಕಷಾಯ.
ಚಳಿಗಾಲ ಮತ್ತು ಮಳೆಗಾಲದಲ್ಲಿ ಹೆಚ್ಚಿನವರಿಗೆ ಎದುರಾಗುವ ಸಮಸ್ಯೆಯೆಂದರೆ ಅದು ನೆಗಡಿ, ಕೆಮ್ಮು, ಜೊತೆಗೆ ಗಂಟಲು ನೋವು. ಇದಕ್ಕೆ ಏನು ತಲೆ ಬಿಸಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಇದು ಸರ್ವೇ ಸಾಮಾನ್ಯ ಮತ್ತು ಸುಲಭವಾಗಿ ವಾಸಿಮಾಡಬಹುದು.
ಹೌದು ಮನೆಯಲ್ಲೇ ಸಿಗುವ ಶುಂಠಿ ಯಿಂದ ನಾವು ಇದನ್ನು ನಿವಾರಿಸಬಹುದು. ಶುಂಠಿ ಚಹಾ ಇದಕ್ಕೆ ಉತ್ತಮವಾದ ಔಷಧಿ. ಇದು ಬೇರೆಲ್ಲ ಔಷಧಿಗಳಿಗಿಂತ ಉತ್ತಮವಾಗಿ ಪರಿಣಾಮ ಬೀರುತ್ತದೆ. ಇದು ಕ್ಷಣ ಮಾತ್ರದಲ್ಲಿ ಗಂಟಲು ನೋವು, ಶೀತ ಕೆಮ್ಮನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಅದರಲ್ಲೂ ಗಂಟಲು ನೋವಿನ ಸಮಸ್ಯೆಗೆ ಬಿಸಿ ಬಿಸಿ ಶುಂಠಿ ಕಷಾಯ ಬೆಸ್ಟ್ ಮನೆಮದ್ದು.
ಶುಂಠಿ ಚಹಾವನ್ನು ತಯಾರು ಮಾಡುವ ವಿಧಾನ:
ಶುಂಠಿ ಚಹಾ ಮಾಡಲು ಬೇಕಾಗಿರುವ ಸಾಮಗ್ರಿಗಳು:
1. ಒಂದರಿಂದ ಎರಡು ಲೋಟ ನೀರು.
2. ಸಣ್ಣ ತುಂಡು ಶುಂಠಿ
3. ಕಾಳುಮೆಣಸು (2-3)
4. ಒಂದು ಚಮಚ ಜೇನು ತುಪ್ಪ
ಶುಂಠಿ ಚಹಾ ತಯಾರು ಮಾಡುವ ವಿಧಾನ:
ಮೊದಲಿಗೆ ನೀರನ್ನು ಸರಿಯಾಗಿ ಬಿಸಿ ಮಾಡಿ ಅದಕ್ಕೆ ಕರಿಮೆಣಸು ಮತ್ತು ಶುಂಠಿ ತುಂಡನ್ನು ಜಜ್ಜಿ ಹಾಕಿ ಸಣ್ಣ ಉರಿಯಲ್ಲಿ ೧೫ ನಿಮಿಷ ಸರಿಯಾಗಿ ಕುದಿಸಿ. ಈಗ ಸ್ಟವ್ ಆಫ್ ಮಾಡಿ ಶುಂಠಿ ರಸವನ್ನು ಸ್ವಲ್ಪ ತಣಿಯಲು ಬಿಡಿ. ನಂತರ ಅದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಕುಡಿಯಿರಿ. ಇದನ್ನು ದಿನಕ್ಕೆ 2 ಬಾರಿ ಸೇವಿಸಿ. ಇದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
ಇದನ್ನು ಓದಿ:ನಿಮ್ಮ ದೃಷ್ಟಿ ಹೆಚ್ಚಾಗಲು ಈ ಕ್ರಮಗಳನ್ನು ಅನುಸರಿಸಿ | Eye Problem In Kannada
2. ಬೆಳ್ಳುಳ್ಳಿ :
ಬೆಳ್ಳುಳ್ಳಿಯನ್ನು ನಾವು ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸುತ್ತೇವೆ. ಇದರಲ್ಲಿ ಎಷ್ಟು ಅರೋಗ್ಯ ಪ್ರಯೋಜನಗಳು ಅಡಗಿವೆ ಗೊತ್ತಾ?
ಇದರಲ್ಲಿ ಅತ್ಯಂತ ಶಕ್ತಿಯುತವಾದ ಆಂಟಿ- ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟು ಕಂಡುಬಂದಿದ್ದು, ಗಂಟಲು ನೋವು ಅಥವಾ ಗಂಟಲಿನ ಸೋಂಕಿನಿಂದ ತಕ್ಷಣವೇ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ನಿಮಗೆ ಗಂಟಲು ನೋವು ಇದ್ದಾಗ 2-3 ಎಸಳು ಹಸಿ ಬೆಳ್ಳುಳ್ಳಿಯನ್ನು ಜಗಿದು ತಿನ್ನಿ. ಇದರಿಂದ ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು. ಒಂದುವೇಳೆ ಹಸಿ ಬೆಳ್ಳುಳ್ಳಿ ತಿನ್ನಲು ಸಾಧ್ಯವಾಗದೆ ಇದ್ದರೆ ಇದನ್ನು ಸೂಪ್ಗಳಿಯಿ ಬೆರೆಸಿ ಕೂಡ ಸೇವಿಸಬಹುದು.
ಇದನ್ನು ಓದಿ: Hallu Novige Mane Maddu | Hallu Novige Parihara
3. ಕಾಳುಮೆಣಸು ಮತ್ತು ಜೇನುತುಪ್ಪ :
ಕಾಳುಮೆಣಸು ಮತ್ತು ಜೇನುತುಪ್ಪ ಇವೆರಡು ಕೂಡ ಕೆಮ್ಮು, ಶೀತ, ಗಂಟಲು ನೋವಿಗೆ ಹೇಳಿಮಾಡಿದ ಔಷಧಿ. ಇದಕ್ಕಾಗಿ ನೀವು ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಒಂದು ಚಮಚ ಜೇನುತುಪ್ಪದ ಜೊತೆಗೆ ಬೆರಿಸಿ ಸೇವಿಸಬೇಕು. ಇದರಿಂದ ತಕ್ಷಣ ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು.
ಇದನ್ನು ಓದಿ: Ratanjot In Kannada | Red Root | Kempu Beru | ರತನ್ ಜೋತ್
4. ಉಪ್ಪುನೀರು:
ಹೆಚ್ಚಾಗಿ ಕೆಮ್ಮಿದಾಗ ಗಂಟಲು ಕೆರೆದು ತುಂಬಾ ನೋವು ಉಂಟಾಗುತ್ತದೆ.
ಇದನ್ನು sore throatಎಂದು ಕರೆಯುತ್ತಾರೆ. ಇದಕ್ಕೆ ಉತ್ತಮವಾದ ಮನೆಮದ್ದೆಂದರೆ ಉಪ್ಪುನೀರು. ಉಪ್ಪುನೀರಿನಿಂದ ಗಳಗಳ ಮಾಡಿದರೆ ಈ ನೋವು ನಿವಾರಣೆಯಾಗುತ್ತದೆ. ಇದಕ್ಕಾಗಿ ಒಂದು ಲೋಟ ಉಗುರು ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಕಲ್ಲುಪ್ಪನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ಈ ನೀರಿನಿಂದ ದಿನಕ್ಕೆ 3-4 ಬಾರಿ ಗಾರ್ಗ್ಲಿಂಗ್ ಮಾಡಿ. ಈತರ ಮಾಡುವುದರಿಂದ ಗಂಟಲುನೋವು ಗುಣಮುಖವಾಗುತ್ತದೆ.
ಇದನ್ನು ಓದಿ: ಬಿಪಿ ಕಂಟ್ರೋಲ್ ಮಾಡುವ ಆಹಾರಗಳು | BP Control Food In Kannada
5. ಅರಿಶಿಣ ಮಿಶ್ರಿತ ಹಾಲು:
ಅರಿಶಿಣ ಮಿಶ್ರಿತ ಹಾಲನ್ನು ಕುಡಿಯುವುದರಿಂದ ಗಂಟಲು ನೋವನ್ನು ನಿವಾರಿಸಬಹುದು. ಇದು ಕೂಡ ಒಂದು ಅತ್ಯುತ್ತಮವಾದ ಮನೆಮದ್ದು. ಇದು ಗಂಟಲಿನ ಸೋಂಕನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಒಂದು ಲೋಟ ಬಿಸಿ ಹಾಲಿಗೆ ಚಿಟಿಕೆ ಅರಶಿನವನ್ನು ಬೆರೆಸಿ ಕುಡಿಯಿರಿ.
ಇದನ್ನು ಓದಿ: Hair Care Tips In Kannada | ನಿಮ್ಮ ಕೂದಲು ದಟ್ಟವಾಗಿ ಬೆಳೆಯಲು ಹೀಗೆ ಮಾಡಿ
6. ಮಸಾಲ ಚಹಾ:
ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಕುಡಿಯಲು ಯೋಗ್ಯವಾದಂತಹ ಪಾನೀಯವೆಂದರೆ ಅದೇ ಮಸಾಲಾ ಚಹಾ. ಇದು ಕೆಮ್ಮು, ನೆಗಡಿ, ಗಂಟಲಿನ ನೋವುಗಳನ್ನು ಹೊಡೆದೋಡಿಸಲು ಸಹಾಯ ಮಾಡುತ್ತದೆ. ಇದೊಂದು ಪುರಾತನ ಕಾಲದಿಂದಲೂ ವಾಡಿಕೆಯಲ್ಲಿರುವ ಮನೆಮದ್ದಾಗಿದೆ. ಮಸಾಲ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆದು. ಮಸಾಲೆ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿರುವುದರಿಂದ ಇದು ಗಂಟಲು ನೋವಿಗೆ ಹೇಳಿ ಮಾಡಿಸಿದ ಔಷಧಿ. ಇದಕ್ಕಾಗಿ ಒಂದು ಲೋಟ ನೀರನ್ನು ಬಿಸಿಮಾಡಿ ಅದಕ್ಕೆ ದಾಲ್ಚಿನ್ನಿ, ಲವಂಗ, ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ರುಚಿಗೆ ಬೇಕಾದರೆ ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಿ ಕುಡಿಯಿರಿ.
ಇದನ್ನು ಓದಿ: ಗಣೇಶ ಚತುರ್ಥಿಯಂದು ಈ ವಿಧಾನದಿಂದ ಗಣೇಶನನ್ನು ಪ್ರತಿಷ್ಠಾಪಿಸಿ್ದರೆ ಸಿದ್ಧಿ ಮನೆಗೆ ಬರುತ್ತದೆ
7. ತುಳಸಿ ಚಹಾ:
ತುಳಸಿ ಆಯುರ್ವೇದದಲ್ಲಿ ಶ್ರೇಷ್ಠವಾದ ಗಿಡಮೂಲಿಕೆಯಾಗಿದೆ. ಇದರ ಚಹಾವನ್ನು ಮಾಡಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಇದು ಗಂಟಲಲ್ಲಿರುವ ಸೋಂಕನ್ನು ನಿವಾರಿಸಲು ಅತ್ಯುತ್ತಮವಾದ ಔಷಧಿ. ಒಂದು ಲೋಟ ನೀರಿಗೆ ೪-೫ ತುಳಸಿ ಎಲೆಗಳನ್ನು ಹಾಕಿ ಸರಿಯಾಗಿ ಕುದಿಸಿ ದಿನಕ್ಕೆ 2 ಬಾರಿ ಕುಡಿಯಿರಿ.