ಕರ್ನಾಟಕ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವಂತಾಗಿದೆ.
ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಗ್ಯಾರಂಟಿ ಯೋಜನೆಗಳನ್ನು(Guarantee Schemes) ಜಾರಿಗೊಳಿಸಿದಲ್ಲದೆ, ಮತ್ತೊಮ್ಮೆ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ.
ಹೌದು ಸ್ನೇಹಿತರೆ, ಈ ಯೋಜನೆಯೇ ಮನಸ್ವಿನಿ ಯೋಜನೆ (Manaswini Scheme), ಇದರಿಂದಾಗಿ ಮಹಿಳೆಯರು ಪ್ರತಿ ತಿಂಗಳು 800 ಹಣವನ್ನು ಪಿಂಚಣಿಯ ರೀತಿ ಪಡೆಯಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಯಾರೆಲ್ಲಾ ಅರ್ಹರು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.
Post Office Mahila Samman Yojana in 2023 | ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿಗಷ್ಟೇ, ಮನಸ್ವಿನಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಿಂದ ರಾಜ್ಯದ ಅರ್ಹ ಮಹಿಳೆಯರು ಪ್ರತಿ ತಿಂಗಳು ಪೆನ್ಷನ್ ರೂಪದಲ್ಲಿ 800 ರೂಪಾಯಿ ಹಣವನ್ನು ಪಡೆಯಬಹುದಾಗಿದೆ.
ಈ ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವಂತಹ ಮಹಿಳೆಯರು ಆನ್ಲೈನಲ್ಲಿ ಲಭ್ಯವಿರುವ ಅಫೀಷಿಯಲ್ ವೆಬ್ಸೈಟ್ಗೆ (Official Website) ಭೇಟಿ ನೀಡಿ, ಅಲ್ಲಿ ಕೇಳಲಾದ ಎಲ್ಲ ಅವಶ್ಯಕ ದಾಖಲಾತಿಗಳನ್ನು ಸರಿಯಾದ ಕ್ರಮದಲ್ಲಿ ನಮೂದಿಸುವ ಮೂಲಕ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಬಹುದು. ಅಥವಾ ಆಫ್ ಲೈನ್ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕಾಗಿ ನೀವು ನಾಡಕಚೇರಿ ಕೇಂದ್ರಗಳಲ್ಲಿ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ (Bapuji Service Centre) ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಶ್ರಮ ಶಕ್ತಿ ಯೋಜನೆಯಿಂದ 50,000 ಸಾಲ ಮತ್ತು ಸಬ್ಸಿಡಿ..! ಈಗಲೇ ಅರ್ಜಿ ಸಲ್ಲಿಸಿ (Shrama Shakti Scheme)
ಮನಸ್ವಿನಿ ಯೋಜನೆಗೆ ಅರ್ಹತೆ:
ಕರ್ನಾಟಕ ಸರ್ಕಾರವು ಅವಿವಾಹಿತ ಹಾಗು ವಿಚ್ಛೇದಿತ ಬಡ ಮಹಿಳೆಯರಿಗೆ ಪ್ರತಿ ತಿಂಗಳು ಪಿಂಚಣಿಯ ರೂಪದಲ್ಲಿ ಅರ್ಥಿಕ ನೆರವನ್ನು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಯಾರು ಅರ್ಹರೆಂದರೆ 40 ರಿಂದ 64 ವರ್ಷದೊಳಗಿನ ಅವಿವಾಹಿತ ಮಹಿಳೆಯರು ಹಾಗೂ ಪತಿಯಿಂದ ದೂರಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ಬಡ ಮಹಿಳೆಯರು ಮನಸ್ವಿನಿ ಯೋಜನೆಗೆ (Manaswini Scheme) ಅರ್ಹರಾಗಿರುತ್ತಾರೆ.
ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ | Bele Hani Parihara
ಮನಸ್ವಿನಿ ಯೋಜನೆಗೆ ಬೇಕಾಗುವ ದಾಖಲಾತಿಗಳು:
ಮನಸ್ವಿನಿ ಯೋಜನೆಗೆ (Manaswini Scheme) ಅರ್ಜಿ ಸಲ್ಲಿಸಲು ಮಹಿಳೆಯರ ಬಳಿ ಕಡ್ಡಾಯವಾಗಿ ಈ ಕೆಳಗಿನ ದಾಖಲೆಗಳು ಬೇಕಾಗಿವೆ.
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (Caste Certificate)
- ಆದೇಶವಾಹಿಯ ನಕಲು ಪತ್ರ