ಕರ್ನಾಟಕ ಸರ್ಕಾರವು ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರವು ಈಗಾಗಲೇ ಕೆಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆ ಯಶಸ್ವಿಯಾಗಿದೆ. ಈಗ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದೆ, ಅದೇ ಸಾಲ ಲಭ್ಯವಾಗುವ ಯೋಜನೆ (ಕರ್ನಾಟಕ ಶ್ರಮ ಶಕ್ತಿ ಯೋಜನೆ). ಬನ್ನಿ ಸ್ನೇಹಿತರೆ ಇದರ ಬಗ್ಗೆ ಸರಿಯಾಗಿ ತಿಳಿಯೋಣ.
ಈ ಲೇಖನದ ಮೂಲಕ, ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನೆಯ ವಿವರವಾದ ಮಾಹಿತಿಯನ್ನು, ಅಂದರೆ ಸಾಲದ ಮೊತ್ತ, ಸಬ್ಸಿಡಿ, ಪಾವತಿಯ ವಿಧಾನ, ಅಗತ್ಯ ಧಾಖಲೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ ಈ ಯೋಜನೆಯ ಉದ್ದೇಶಗಳು, ಯಾರು ಅರ್ಹರು, ಪಾವತಿ ವಿಧಾನ, ಅಗತ್ಯವಿರುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂತಾದ ವಿಷಯಗಳನ್ನು ತಿಳಿಯಿರಿ.
ಕರ್ನಾಟಕ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಜನತೆಗೆ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಸಲುವಾಗಿ ಸಹಾಯ ಮಾಡಲು ಶರ್ಮ ಶಕ್ತಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಅರ್ಜಿದಾರರು 50,000 ರೂಪಾಯಿವರೆಗೆ ಸಾಲ ಪಡೆಯಬಹುದು. ಇದರಲ್ಲಿ 50% ಸಬ್ಸಿಡಿ ಸಿಗುತ್ತದೆ. ಅಂದರೆ ಬರಿ 25,000 ರೂ ಗಳನ್ನೂ ಮರುಪಾವತಿಸಬೇಕಾಗುತ್ತದೆ. ಇದನ್ನು 36 ತಿಂಗಳೊಳಗೆ ಮರುಪಾವತಿ ಮಾಡಬೇಕು. ಈ ಸಾಲಕ್ಕೆ ಶೇಕಡ 4 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.
ಅಭ್ಯರ್ಥಿಗಳಿಗೆ ಸರ್ಕಾರವು ತಾಂತ್ರಿಕ ಅಥವಾ ಕಲಾತ್ಮಕ ಪ್ರತಿಭೆಗಳ ತರಬೇತಿಯನ್ನು ನೀಡುತ್ತದೆ. ಇದಕ್ಕಾಗಿ ಅಭ್ಯರ್ಥಿಯ ವಯಸ್ಸು 18 ಮತ್ತು 55 ವರ್ಷಗಳ ನಡುವೆ ಇರಬೇಕು ಹಾಗೂ ವಾರ್ಷಿಕ ಆದಾಯವು 3.50 ಲಕ್ಷ ರೂಪಾಯಿಯನ್ನು ಮೀರಬಾರದು.
ಕರ್ನಾಟಕ ಶ್ರಮ ಶಕ್ತಿ ಯೋಜನೆಗೆ ಅರ್ಹತೆ:
- ಅರ್ಜಿದಾರರು(ಅಭ್ಯರ್ಥಿಯು) ಕರ್ನಾಟಕ ರಾಜ್ಯದಲ್ಲಿ ಶಾಶ್ವತವಾಗಿ ನೆಲೆಸಿರಬೇಕು
- ಅಭ್ಯರ್ಥಿಯ ವಯಸ್ಸು 18 ಮತ್ತು 55 ವರ್ಷಗಳ ಒಳಗೆ ಇರಬೇಕು.
- ಈ ಹಿಂದೆ KMDC ಯಿಂದ ಯಾವುದೇ ಸಾಲ ಪಡೆದಿರಬಾರದು.
- ಅಭ್ಯರ್ಥಿಯ ವಾರ್ಷಿಕ ಆದಾಯವು 3.50 ಲಕ್ಷ ರೂಪಾಯಿ ಮೀರಿರಬಾರದು.
- ಅಭ್ಯರ್ಥಿಯು ಅಲ್ಪಸಂಖ್ಯಾತ ಗುಂಪಿನ ಸದಸ್ಯರಾಗಿರಬೇಕು.
ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು:
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರ
- ವಯೋಮಿತಿಯ ಪ್ರಮಾಣ ಪತ್ರ
- ಯೋಜನೆಯ ಅರ್ಜಿ ನಮೂನೆ
- ಖಾಯಂ ಮನೆ ವಿಳಾಸದ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ನೀವು ಪ್ರಾರಂಭಿಸುತ್ತಿರುವಂತಹ ವ್ಯಾಪಾರದ ಬಗ್ಗೆ ಮಾಹಿತಿ ಅಥವಾ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಫೋಟೋ
ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಜಮಾ ಆದವರ ಪಟ್ಟಿಯನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್
ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು?
ನೀವು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ KMDC ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಪ್ರಕ್ರಿಯೆಯು ಈಗ ಲಭ್ಯವಿದೆಯೇ ಎಂಬುದನ್ನು ನಿಖರವಾಗಿ ತಿಳಿಯಲು KMDC ವೆಬ್ಸೈಟ್ ಅಥವಾ ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಬೇಕು.
KMDC ವೆಬ್ಸೈಟ್: https://kmdconline.karnataka.gov.in/Portal/
ಸಂಬಂಧಿತ ಇಲಾಖೆ: ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಅಥವಾ ಉದ್ಯೋಗ ಇಲಾಖೆಯನ್ನು ಸಂಪರ್ಕಿಸಿ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು. https://kmdc.karnataka.gov.in/22/shrama-shakthi/en